ಚಾಮರಾಜನಗರ : ಮಲೆ ಮಹದೇಶ್ವರ ಬೆಟ್ಟದಲ್ಲಿ ಮಾಸಿಕ ಹುಂಡಿ ಎಣಿಕೆ ಕಾರ್ಯ ಮುಕ್ತಯವಾಗಿದ್ದು
ಮತ್ತೆ ಮಾದಪ್ಪ ಕೋಟ್ಯಾಧಿಪತಿಯಾಗಿದ್ದಾರೆ.
ನಿನ್ನೆ ಬೆಳಗ್ಗೆಯಿಂದ ರಾತ್ರಿವರಗೆ ನಡೆದ ಹುಂಡಿ ಎಣಿಕೆ.
ಬರೋಬ್ಬರಿ 2.38 ಕೋಟಿ ನಗದು, 3 ಕೆ.ಜಿ ಬೆಳ್ಳಿ ಮತ್ತು 63 ಗ್ರಾಂ ಚಿನ್ನ ಸಂಗ್ರಹ.ಪ್ರಾಧಿಕಾರ ಮತ್ತು ಎಸ್.ಬಿ.ಐ ಬ್ಯಾಂಕ್ ಸಿಬ್ಬಂದಿಗಳಿಂದ ನಡೆದ ಎಣಿಕೆ.
ನೂತನ ಪ್ರಾಧಿಕಾರದ ಕಾರ್ಯದರ್ಶಿ ಸರಸ್ವತಿ ನೇತೃತ್ವದಲ್ಲಿ ಎಣಿಕೆ ಕಾರ್ಯ.ದಿನದಿಂದ ದಿನಕ್ಕೆ ಹುಂಡಿಯಲ್ಲಿ ಹೆಚ್ಚಿದ ಕಾಣಿಕೆ ಹಣ.ಮಹಿಳೆಯರಿಗೆ ಫ್ರೀ ಬಸ್ ಎಫೆಕ್ಟ್ ಮಾದಪ್ಪನ ಹುಂಡಿಯಲ್ಲಿ ಗಣನೀಯ ಏರಿಕೆ.
ಉಚಿತ ಪ್ರಯಾಣದಿಂದ ಧಾರ್ಮಿಕ ಕೇಂದ್ರಗಳತ್ತ ಮಹಿಳಾ ಮಣಿಗಳ ದಾಂಗುಡಿ.ದೇವಾಲಯದ ಆದಾಯಗಳಲ್ಲಿ ಏರಿಕೆ.ಕರ್ನಾಟಕ ಶ್ರೀಮಂತ ದೇವಾಲಯಗಳಲ್ಲಿ ಒಂದಾದ ಮಲೆ ಮಹದೇಶ್ವರ ಶ್ರೀ ಕ್ಷೇತ್ರ.ಕೇವಲ ಒಂದು ತಿಂಗಳ ಎಣಿಕೆಯಲ್ಲಿ ಕೋಟ್ಯಾಂತರ ನಗದು ಸಂಗ್ರಹ.
ಚಿನ್ನದ ರಥ, ಬೆಳ್ಳಿರಥ, ಹುಲಿವಾಹನ, ಬಸವ ವಾಹನ, ಸೇವೆ ಎಂದು ಸಾವಿರಾರು ರೂಪಾಯಿಗಳ ಟಿಕೆಟ್ ಪಡೆದು ಹರಕೆ ತೀರುವ ಭಕ್ತರು.ನೆಚ್ಚಿನ ಮಾದಪ್ಪ ಭಕ್ತರ ಉದಾರ ಹುಂಡಿಯ ಗಾತ್ರ ಅಪಾರ.ವಿವಿಧ ಮೂಲಗಳಿಂದ ವಾರ್ಷಿಕ ನೂರು ಕೋಟಿಗೂ ಹೆಚ್ಚು ಆದಾಯ ಬರುವ ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟ.