ಮೈಸೂರು : ವಿಶ್ವ ವಿಖ್ಯಾತ ಮೈಸೂರು ದಸರಾಗೆ ಪ್ರತಿ ವರ್ಷ ಆನೆಗಳಿಗೆ ಪೂಜೆ ಸಲ್ಲಿಸುವ ಮೂಲಕ ವಿದ್ಯುಕ್ತ ಚಾಲನೆ ನೀಡಲಾಗುತ್ತದೆ. ಈ ಕಾರ್ಯಕ್ರಮದಲ್ಲಿ ಮೈಸೂರು ಜಿಲ್ಲೆಯ ಎಲ್ಲಾ ಶಾಸಕರು ಜನ ಪ್ರತಿನಿಧಿಗಳು ಭಾಗಿಯಾಗುತ್ತಿದ್ದು ಈ ಬಾರಿ ಕೆಲವೇ ಕೆಲವು ಜನಪ್ರತಿನಿಧಿಗಳು ಮಾತ್ರ ಭಾಗಿಯಾಗಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ, ಅರಣ್ಯ ಸಚಿವ ಈಶ್ವರ ಖಂಡ್ರೆ, ಶಾಸಕ ಜಿ.ಡಿ.ಹರೀಶ್‌ಗೌಡ, ಸಿ.ಎನ್. ಮಂಜೇಗೌಡ.
ಮೇಯರ್ ಶಿವಕುಮಾರ್, ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ, ಎಸ್ಪಿ ಸೀಮಾ ಲಟ್ಕರ್ ಅರಣ್ಯಾಧಿಕಾರಿಗಳು ಭಾಗಿಯಾಗಿದ್ದು ಉಳಿದವರು ಗೈರಾಗಿದ್ದಾರೆ.
ಮೈಸೂರು ದಸರಾ 2023. ನಾಸ್ತಿಕತೆ ಮೆರೆದ ಸಚಿವ ಮಹದೇವಪ್ಪ
ಗಜಪಡೆ ಸ್ವಾಗತ ಪೂಜೆಯಲ್ಲಿ ಉಸ್ತುವಾರಿ ಸಚಿವರ ನಾಸ್ತಿಕತೆ ಮೆರೆದಿದ್ದಾರೆ. ಗಜ ಪಡೆಗೆ ಪೂಜೆ ಸಲ್ಲಿಸಲು ಹೆಚ್‌ಸಿ.ಮಹದೇವಪ್ಪ ನಿರಾಕರಣೆ ಮಾಡಿ
ಕೇವಲ ಪುಷ್ಪಾರ್ಚನೆ ಮಾಡಿ ಚಾಲನೆ ನೀಡಿದ್ದಾರೆ
ಆರತಿ ಬೆಳಗಲು ಅರಣ್ಯ ಸಚಿವ ಈಶ್ವರ್ ಖಂಡ್ರೆ ಬಿಟ್ಟು ಹಿಂದೆ ಸರಿದ ಎಚ್ಸಿಎಂ.ಸಂಪ್ರದಾಯದಂತೆ ಜಿಲ್ಲಾ ಉಸ್ತುವಾರಿಗಳಿಂದ ನಡೆಯುತ್ತಿದ್ದ ಪೂಜಾ ಕಾರ್ಯ.
ಸಂಪ್ರದಾಯವನ್ನು ಗಾಳಿಗೆ ತೂರಿದ ಹಾಲಿ ಜಿಲ್ಲಾ ಉಸ್ತುವಾರಿ ಸಚಿವ ಎಚ್ಸಿಎಂ.ಕಾಟಾಚಾರಕ್ಕೆ ಪೂಜೆ ಸಲ್ಲಿಸಿದಂತೆ ಕಂಡ ಉಸ್ತುವಾರಿ ಸಚಿವರ ನಡೆ.