ಮೈಸೂರು : ಈ ತಿಂಗಳು 27 ಕ್ಕೆ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದು 100 ದಿನಗಳು ತುಂಬುತ್ತಿದೆ.
ಈ ಸಂಧರ್ಭದಲ್ಲಿ ನಾವು 100 ದಿನ ಸಾಧನೆ ತಿಳಿಸಲು ಸಣ್ಣ ಕೈ ಪಿಡಿ ಮಾಡಿದ್ದೇವೆ. ನಮ್ಮ ಸಾಧನೆ ಒಳಗೊಂಡ ಪುಸ್ತಕ ರಾಹುಲ್ ಗಾಂಧಿ ಬಿಡುಗಡೆ ಮಾಡಿದ್ದೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಹಿಂದೆ ಯಾವ ಸರ್ಕಾರ ಕೊಡ ಕೊಟ್ಟ ಮಾತಿನಂತೆ ನಡೆದುಕೊಂಡ ಸರ್ಕಾರ ಇರಲಿಲ್ಲ.
ಅನೇಕ ಭರವಸೆಯನ್ನು ಚುನಾವಣಾ ಸಂದರ್ಭದಲ್ಲಿ ಜನರ ಮುಂದೆ ಇಟ್ಟಿದ್ದೇವು
ಕೊಟ್ಟ ಮಾತಿಮಂತೆ ಕಳೆದ ಬಾರಿ ಇದ್ದ ವೇಳೆಯೂ ಕೊಟ್ಟ ಭರವಸೆ ಈಡೆರಿಸಿದ್ದೇವೆ.
ನಮ್ಮ ಸರ್ಕಾರ ನುಡಿದಂತೆ ನಡೆದಿದ್ದೇವೆ.
ಮುಂದಿನ ಐದು ವರ್ಷಗಳಗಳಲ್ಲಿ ನಾವು ನೂರಕ್ಕೂ ನೂರಷ್ಟು ಭರವಸೆ ಈಡೇರಿಸುತ್ತೇವೆ.
ಇವತ್ತು ಐದು ಗ್ಯಾರಂಟಿ ಜನರ ಮುಂದೆ ಇಟ್ಟಿದ್ದೇವು.
ಕರ್ನಾಟಕದಲ್ಲಿ 1 ಕೋಟಿ 26 ಲಕ್ಷ ಕುಟುಂಬಗಳು ಇವೆ.
ನೊಂದಣಿ ಆಗಿರೋ ಕುಟುಂಬ 1 ಕೋಟಿ 10 ಲಕ್ಷ.
ಈ ಕುಟುಂಬದ ಯಜಮಾನಿಗೆ 2 ಸಾವಿರ ರೂ ಅಕೌಂಟ್ ಗೆ ಜಮಾ ಮಾಡುವ ಕೆಲಸ ಮಾಡಿದ್ದೇವೆ.
ಭಾರತದಲ್ಲಿ ಯಾವ ರಾಜ್ಯವೂ ಕೂಡ ಇಷ್ಟು ದೊಡ್ಡ ಪ್ರಮಾಣದಲ್ಲಿಹಣ ಕೊಡುವ ಕೆಲಸ ಮಾಡಿಲ್ಲ.
ಬಡವರಿಗೆ ತಿಂಗಳಿಗೆ 2 ಸಾವಿರ ವರ್ಷಕ್ಕೆ 24 ಸಾವಿರ ಹಣ ಜಮೆ ಮಾಡಲಾಗುತ್ತಿದೆ ಎಂದರು.
ಇಷ್ಟೊಂದು ದೊಡ್ಡ ಮೊತ್ತ ಹಣ ಹಾಕ್ತಿರೋದು ನಮ್ಮ ಸರ್ಕಾರ ಬಿಟ್ಟರೇ ಬೇರಾವುದೇ ಸರ್ಕಾರ ದೇಶದಲ್ಲಿ ಮಾಡುತ್ತಿಲ್ಲ.ಐದು ಗ್ಯಾರಂಟಿ ಈಡೇರಿಸಲು ಆಗಲ್ಲ ಅಂತಾ ಮೋದಿ, ಜೆಡಿಎಸ್ ಅವ್ರು ಹೇಳ್ತಿದ್ರು
ನಾವು ನಾಲ್ಕು ಗ್ಯಾರಂಟಿ ಜಾರಿ ಮಾಡಿದ್ದೇವೆ.
ಐದನೇ ಗ್ಯಾರಂಟಿ ಯುವನಿಧಿ ಡಿಸೆಂಬರ್, ಜನವರಿಯಲ್ಲಿ ಜಾರಿ ಮಾಡ್ತೇವೆ.ಆದ್ರೆ ಕರ್ನಾಟಕ ರಾಜ್ಯ ದಿವಾಳಿ ಆಗಲಿಲ್ಲ
ಎಲ್ಲ ಕಾರ್ಯಕ್ರಮಗಳು ನಿಂತಿಲ್ಲ.
56 ಸಾವಿರ ಕೋಟಿ ಹಣ ಐದು ಗ್ಯಾರಂಟಿಗೆ ಬೇಕಿದೆ.
ಕಾಂಗ್ರೆಸ್ ಪಕ್ಷ ಯಾವತ್ತೂ ಬಡವರು, ಹಿಂದುಳಿದ ಅಲ್ಪಸಂಖ್ಯಾತ,ರೈತರು ಕಾರ್ಮಿಕ ಜೊತೆಗೆ ಇರೋ ಪಕ್ಷ ಅನ್ನೋದನ್ನ ನಮ್ಮ ಸರ್ಕಾರ ಸಾಬೀತು ಮಾಡಿದೆ.
ಸಮಾರಂಭದಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿಕೆ.
ಯಾರು ಏನೇ ಹೇಳಿದ್ದೂ ಕಾಂಗ್ರೆಸ್ ನುಡಿದಂತೆ ನಡೆದಿದ್ದೇವೆ.ವಿರೋಧ ಪಕ್ಷದವ್ರು ಹೇಳುವಂತದ್ದು ಸುಳ್ಳು ಎಂದು ಸಿದ್ದರಾಮಯ್ಯ ಹೇಳಿದರು