ಮೈಸೂರು: ಚುನಾವಣಾ ಪೂರ್ವದಲ್ಲಿ ನಾವು ಐದು ಗ್ಯಾರಂಟಿಗಳ ಮಾತನ್ನು ನಾವು ಕೊಟ್ಟಿದ್ದೇವು.
ನುಡಿದಂತೆ ನಡೆಯುವ ಸರ್ಕಾರ ಇದ್ದರೆ ಅದು ಕಾಂಗ್ರೆಸ್ ಸರ್ಕಾರ ಎಂದು ರಾಹುಲ್ ಗಾಂಧಿ ಭಾಷಣ ಆರಂಭಿಸಿದರು.
ಈ ಕಾರ್ಯಕ್ರಮದಲ್ಲಿ ಬಟನ್ ಒತ್ತುವ ಮೂಲಕ ಕರ್ನಾಟಕದ ಮಹಿಳೆಯರ ಅಕೌಂಟ್ ಗೆ 2 ಸಾವಿರ ಹಣ ವರ್ಗಾವಣೆ ಮಾಡಿದ್ದೇವೆ.ಈದೇ ರೀತಿ ಪ್ರತಿ ತಿಂಗಳು ಎರಡು ಸಾವಿರ ರೂ ಜಮೆ ಆಗುತ್ತದೆ.
ಇದು ಕರ್ನಾಟಕ ಸರ್ಕಾರದ ಗ್ಯಾರಂಟಿ ಭರವಸೆ.
ನಾವು ನಿಮಗೆ ಮತ್ತೊಂದು ಭರವಸೆ ಕೊಟ್ಟಿದ್ದೇವೆ.
ಮಹಿಳೆಯರಿಗೆ ಉಚಿತ ಪ್ರಯಾಣದ ಭರವಸೆ ನೀಡಿದ್ದೇವು.ಶಕ್ತಿ ಯೋಜನೆ ಅಡಿಯಲ್ಲಿ ಉಚಿತ ಸಾರಿಗೆ ಬಸ್ ಯೋಜನೆ ಜಾರಿ ಮಾಡಿದ್ದೇವೆ.
ಅನ್ನ ಭಾಗ್ಯ ಯೋಜನೆ ಅಡಿಯಲ್ಲಿ ಅರ್ಹರಿಗೆ ತಲಾ 10 ಕೆ.ಜಿ.ಅಕ್ಕಿ ಕೊಡುವ ಕೆಲಸ ಮಾಡಿದ್ದೇವೆ ಎಂದರು.
ಪ್ರತಿಯೊಂದು ಮನೆಗೂ 200 ಯೂನಿಟ್ ವಿದ್ಯುತ್ ಕೊಡುವ ಕೆಲಸ ಮಾಡಿದ್ದೇವೆ.ಒಂದು ಯೋಜನೆ ಬಿಟ್ಟು ಉಳಿದ ಯೋಜನೆಗಳು ಮಹಿಳೆಯರ ಸ್ವಾವಲಂಬನೆಗಾಗಿ ಮಾಡಿರೋ ಯೋಜನೆಗಳು.ಯುವ ನಿಧಿ ಯೋಜನೆ ಬಿಟ್ಟು, ಇನ್ನುಳಿದವು ಮಹಿಳೆಯರ ಕೇಂದ್ರಿತ ಯೋಜನೆಗಳು.ಅತ್ಯಂತ ದೊಡ್ಡ ಮರ ಇದ್ರು ಸಧೃಡ ಬೇರು ಇಲ್ಲದಿದ್ದರೆ ಮರ ನಿಲ್ಲೊದಿಲ್ಲ.ಇವತ್ತು ವಿಶಾಲ ಕಟ್ಟಡ ಸ್ಥಾಪನೆ ಮಾಡಲು ಉತ್ತಮ ಪಾಯ ಅಗತ್ಯ.
ಭಾರತ್ ಜೋಡೋ ಯಾತ್ರೆ ಮಾಡಿದ್ದ ಸಂದರ್ಭದಲ್ಲಿ ಸಹಸ್ರಾರು ಮಹಿಳೆಯರ ಜೊತೆ ಮಾತನಾಡಿದ್ದೇನೆ.
ಕರ್ನಾಟಕ ಒಂದರಲ್ಲೇ 600 ಕಿ.ಮೀ.ಪಾದಯಾತ್ರೆ ಮಾಡಿದ್ದೇನೆ ಎಂದು ಹೇಳಿದರು.
ಪಾದಯಾತ್ರೆ ವೇಳೆ ನಾನು ಬೆಲೆ ಏರಿಕೆಯಿಂದ ನೀವು ಸಂಕಷ್ಟಕ್ಕೆ ಸಿಲುಕಿದ್ದನ್ನು ನೋಡಿದ್ದೇನೆ.
ಬೆಲೆ ಏರಿಕೆ ಹೊರೆ ಮಹಿಳೆಯರ ಮೇಲೆ ಬಿದ್ದು ಸಂಕಷ್ಟಕ್ಕೆ ಸಿಲುಕಿದ್ದೇವೆ ಎಂದಿದ್ದರು.ಕರ್ನಾಟಕ ರಾಜ್ಯದಲ್ಲಿ ಪ್ರತಿಯೋಂದು ಮನೆಯ ಅಡಿಪಾಯ, ಮರದ ಬೇರುಗಳು ಮಹಿಳೆಯರು.ಸಧೃಡವಾಗಿ ಮಹಿಳೆಯರು ಇದ್ದಾರೆ.ಕರ್ನಾಟಕದ ಶಕ್ತಿ ಅಂದ್ರೆ ಹೆಣ್ಣು ಮಕ್ಕಳು.
ಹೀಗಾಗಿಯೇ ಐತಿಹಾಸಿಕ ಯೋಜನೆಯನ್ನ ಜಾರಿಗೆ ತಂದಿದೆ.ಕರ್ನಾಟಕ ಸರ್ಕಾರ ನೂರು ದಿನ ಪೂರೈಸಿದೆ.
ನಾವು ಕೊಟ್ಟಿರೋ ಭರವಸೆ ಈಡೇರಿಸಿದ್ದೇವೆ.
ನುಡಿದಂತೆ ನಡೆದಿದ್ದೇವೆ.ರಕ್ಷಾ ಬಂಧನ ದಿನ ನಾವು ನುಡಿದಂತೆ ನಿಮ್ಮ ಅಕೌಂಟ್ ಗೆ ಹಣ ಹಾಕಿದ್ದೇವೆ ಎಂದು ರಾಹುಲ್ ಹೇಳಿದರು