ಮೈಸೂರು : ಅಮಿತ್ ಶಾ ಜಗದೀಶ್ ಶೆಟ್ಟರ್ ಅವರಿಗೆ ಕರೆ ಮಾಡಿದ ವಿಚಾರ ಬಿಜೆಪಿ ಜಗದೀಶ್ ಶೆಟ್ಟರ್ ಅವರಿಗೆ ಯಾವ ರೀತಿ ಮೋಸ ಮಾಡಿತು ಎಂಬುದು ಇಡೀ ರಾಜ್ಯಕ್ಕೆ ಗೊತ್ತಿದೆ ಎಂದು ಚಾಮರಾಜ ಕ್ಷೇತ್ರದ ಶಾಸಕ ಕೆ ಹರೀಶ್ ಗೌಡ ಹೇಳಿದರು.
ಅಮಿತ್ ಶಾ ಕರೆ ಮಾಡಿದ ತಕ್ಷಣ ಜಗದೀಶ್ ಶೆಟ್ಟರ್ ಮತ್ತೆ ಬಿಜೆಪಿಗೆ ಹೋಗುವುದಿಲ್ಲ ಕಾಂಗ್ರೆಸ್ ಅವರಿಗೆ ಸೂಕ್ತ ಸ್ಥಾನ ಮಾನ ಕೊಟ್ಟಿದೆಅವರು ಎಲ್ಲವನ್ನು ಅಳೆದು ತೂಗಿ ಕಾಂಗ್ರೆಸ್ ಪಕ್ಷಕ್ಕೆ ಬಂದವರು ಇನ್ನು ಸಾಕಷ್ಟು ಜನ ಬಿಜೆಪಿ ಜೆಡಿಎಸ್‌ನಿಂದ ನಮ್ಮ ಪಕ್ಷಕ್ಕೆ ಬರಲು ತುದಿಗಾಲಲ್ಲಿ ನಿಂತಿದ್ದಾರೆ ನಮ್ಮ ಮುಂದೆ ಇರುವುದು ಗ್ಯಾರಂಟಿ ಯೋಜನೆ ಹಾಗೂ ಲೋಕಸಭಾ ಚುನಾವಣೆ
ಈ ಬಾರಿ ರಾಜ್ಯದಲ್ಲಿ 20 ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲ್ಲಲಿದೆ ಎಂದರು.
ಮೈಸೂರು ಕೊಡಗು ಕ್ಷೇತ್ರವನ್ನು ಖಂಡಿತವಾಗಿ ಈ ಬಾರಿ ನಾವು ಗೆಲ್ಲುತ್ತೇವೆಇದರಿಂದ ನಮ್ಮನ್ನು ವಿಚಲಿತ ಮಾಡುವ ಷಡ್ಯಂತ್ರ ಬಿಜೆಪಿ ಮಾಡುತ್ತಿದೆ ಆದರೆ ಅವರ ಷಡ್ಯಂತರಗಳಿಗೆ ನಾವು ವಿಚಲಿತರಾಗುವುದಿಲ್ಲ
ಇದಕ್ಕೆ ತಕ್ಕ ಉತ್ತರವನ್ನು ಒಬ್ಬ ಸಾಮಾನ್ಯ ಕಾರ್ಯಕರ್ತ ಸಹಾ ನೀಡಲು ಸಮರ್ಥನಾಗಿದ್ದಾನೆ ಎಂದರು.

