ಮೈಸೂರು : ತಮಿಳುನಾಡಿಗೆ ಕಾವೇರಿ ನೀರು ಬಿಟ್ಟಿರುವ ಕ್ರಮ ಖಂಡಿಸಿ ಕರ್ನಾಟಕ ಸೇನಾ ಪಡೆ ವತಿಯಿಂದ ಜಿಲ್ಲಾ ಪಂಚಾಯತ್ ಮುಂಭಾಗ ನಡೆದ ಪ್ರತಿಭಟನೆ ನಡೆಸಿದರು.
ನಮ್ಮ ರಾಜ್ಯದ ಜಲಾಶಯಗಳಲ್ಲೆ ನೀರಿಲ್ಲ, ಮುಂಗಾರು ಮಳೆ ಕೈಕೊಟ್ಟಿದೆ ಕೆ.ಆರ್.ಎಸ್ ಕಬಿನಿ ಹಾರಂಗಿಯಲ್ಲಿ ನೀರಿಲ್ಲ.ಹೀಗಿದ್ದರೂ ತಮಿಳು ನಾಡಿಗೆ ನೀರು ಬಿಟ್ಟಿದ್ದಾರೆ
ಕಾವೇರಿ ನೀರು ನಿರ್ಹವಣೆ ಮಂಡಳಿ ರಾಜ್ಯಕ್ಕೆ ಅನ್ಯಾಯ ಮಾಡುತ್ತಿದೆ. ಸಿದ್ದರಾಮಯ್ಯ ಡಿಕೆ ಶಿವಕುಮಾರ್ ಚುನಾವಣೆಗೂ ಹೇಳಿದೊಂದು ಮಾಡಿದೊಂದು
ಮೇಕೆದಾಟು ವಿಚಾರದಲ್ಲಿ ಪಾದಯಾತ್ರೆ ಮಾಡಿ ರಾಜ್ಯದ ನದಿ ರೈತರ ಹಿತ ಕಾಯುತ್ತೇವೆ ಎಂದಿದ್ದರು
ಆದ್ರೆ ಈಗ ರಾಜ್ಯದ ರೈತರ ಹಿತ ಮರೆತಿದ್ದಾರೆ ಎಂದು ಆಕ್ರೋಶ ಹೊರ ಹಾಕಿದರು.
ಈ ಹಿಂದೆ ಬಂಗಾರಪ್ಪ ಸಿಎಂ ಆಗಿದ್ದಾಗ ಸುಗ್ರೀವಾಜ್ಞೆ ತಂದು ತಮಿಳು ನಾಡಿಗೆ ನೀರು ಬಿಡದೆ ಗಟ್ಟಿತನ ತೋರಿದ್ದರುಈಗಿನ ಸರ್ಕಾರ ರೀತಿಯ ದಿಟ್ಟತನ ತೋರಬೇಕು ಎಂದು ಕರ್ನಾಟಕ ಸೇನಾ ಪಡೆ ಜಿಲ್ಲಾಧ್ಯಕ್ಷ ತೇಜಸ್ ಲೋಕೇಶ್ ಗೌಡ ಹೇಳಿಕೆ