ಚಾಮರಾಜನಗರ : ಕಬ್ಬಿನ ಗದ್ದೆಗೆ ಕಿಡಿಕೇಡಿಗಳಿಂದ ಬೆಂಕಿ ಹಾಕಿರುವ ಪರಿಣಾಮ ಲಕ್ಷಾಂತರ ಮೌಲ್ಯದ ಕಬ್ಬು ಬೆಳೆ ನಾಶವಾಗಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ರಂಗೂಪುರದಲ್ಲಿ ನಡೆದಿದೆ.
ತಾಲೂಕಿನ ಕೆಬ್ಬೆಪುರ ಗ್ರಾಮದ ಟೊಮೊಟೊ ಬೆಳೆ ನಾಶ ಪ್ರಕರಣದ ಬೆನ್ನಲ್ಲೇ ಮತ್ತೊಂದು ಘಟನೆ ನಡೆದಿದೆ.
ಗ್ರಾಮದ ರೈತ ನಟರಾಜು ರವರ ಕಬ್ಬಿನ ಗದ್ದೆಗೆ ರಾತ್ರಿ ವೇಳೆ ಪೆಟ್ರೋಲ್ ಎರಚಿ ಬೆಂಕಿಯನ್ನು ಹಚ್ಚಿ ಪರಾರಿಯಾಗಿರುವ ಕಿಡಿಗೇಡಿಗಳು. ಒಂದೂವರೆ ಎಕರೆ ಕಬ್ಬು ಸಂಪೂರ್ಣ ಭಸ್ಮ.ಬೇಗೂರು ಪೋಲಿಸ್ ಠಾಣೆ ವ್ಯಾಪೀಯಲ್ಲಿ ಘಟನೆ ನಡೆದಿದ್ದು ಸ್ದಳಕ್ಕೆ ಬೇಗೂರು ಪೊಲಿಸ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಅಲ್ಲದೆ ಪ್ರಕರಣಕೂಡ ದಾಖಲು ಮಾಡಿಕೊಂಡಿದ್ದಾರೆ.