ಚಾಮರಾಜನಗರ : ಬಂಡಿಪುರದ ಪರಿಸರ ಸೂಕ್ಷ್ಮ ವಲಯ ಪ್ರದೇಶದಲ್ಲಿ ನಟ ಗಣೇಶ್ ಕಟ್ಟಡ ನಿರ್ಮಾಣ ಹಿನ್ನೆಲೆಯಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಗೆ ನೋಟಿಸ್ ಜಾರಿ ಮಾಡಲಾಗಿದೆ.
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದಕೆರೆ ವಲಯದಲ್ಲಿ ಕಾನೂನು ಬಾಹಿರ ಕಟ್ಟಡ ನಿರ್ಮಾಣಕ್ಕೆ ಮುಂದಾಗಿದ್ದ ನಟ ಎಂದು ಆರೋಪ ಕೇಳಿ ಬಂದಿದೆ.
ಅರಣ್ಯ ಇಲಾಖೆ ನೀತಿ ನಿಯಮ ಉಲ್ಲಂಘನೆ ಮಾಡಿದಿದ್ದಾರೆ ಎಂಬ ಆರೋಪ ಕೂಡ ಇದೆ.
ಪರಿಸರವಾದಿ ಜೋಸೆಫ್ ಹೂವರ್ ಮತ್ತು ಸ್ಥಳೀಯರ ಆಕ್ಷೇಪದ ಮೇರೆಗೆ ನೋಟಿಸ್ ನೀಡಲಾಗಿದೆ.
ಬಂಡಿಪುರದ ಸಿ.ಎಫ್.ಡಾ.ರಮೇಶ್ ಕುಮಾರ ರಿಂದ ನೋಟಿಸ್ ಜಾರಿ ಮಾಡಿದ್ದು, ಜಕ್ಕಹಳ್ಳಿ ಸರ್ವೆ ನಂಬರ್ 105 ರಲ್ಲಿ 1.24 ಗುಂಟೆ ಜಮೀನು ಗಣೇಶ್ ಹೊಂದಿದ್ದಾರೆ. ಇದರಲ್ಲಿ ತಾತ್ಕಾಲಿಕ ವಾಸದ ಕಟ್ಟಡ ನಿರ್ಮಾಣ ಮಾಡುತ್ತಾನೆ ಎಂದು ನಟ ಅನುಮತಿ ಪಡೆದಿದ್ದರು ಆದರೆ ಈಗ ಬೃಹತ್ ಕಟ್ಟಡ ನಿರ್ಮಾಣ ಮಾಡುತ್ತಿದ್ದಾರೆ ಎಂದು ನೋಟಿಸ್ ನೀಡಲಾಗಿದೆ.
ಕಿರಿಯ ಅಧಿಕಾರಿಗಳು ವರದಿ ಆಧಾರಿಸಿ ಸಿ.ಎಫ್ ಓ ಡಾ.ರಮೇಶ್ ಕುಮಾರ್ ರಿಂದ ನಟ ಗಣೇಶ್ ಗೆ ನೋಟಿಸ್ ಜಾರಿ ಮಾಡಲಾಗಿದ್ದು ಕಟ್ಟಡ ನಿರ್ಮಾಣ ಕಾಮಗಾರಿ ಸ್ಥಗಿತಕ್ಕೆ ಸೂಚನೆ ಕೊಡಲಾಗಿದೆ.