ಮೈಸೂರು : ಹಾರಂಗಿ ಸೂಪರಿಟೆಂಡ್ ಇಂಜಿನಿಯರ್ ರಘುಪತಿ ಮನೆ ಮೇಲೆ ಲೋಕಯುಕ್ತ ರೈಡ್ ಆಗಿದೆ.
ಮೈಸೂರಿನ ವಿಜಯನಗರ 4 ನೇ ಹಂತದಲ್ಲಿರುವ ಬೃಹತ್ ಬಂಗಲೆಗೆ ಬೆಳ್ಳಂ ಬೆಳಿಗ್ಗೆ ಲೋಕಾಯುಕ್ತ ಅಧಿಕಾರಿಗಳು
ಎರಡು ಜೀಪ್ ನಲ್ಲಿ ಬಂದಿದ್ದಾರೆ.
KA 42 ರಿಜಿಸ್ಟ್ರೇಷನ್ ಹೊಂದಿರುವ ಜೀಪ್ ಗಳಲ್ಲಿ ಬಂದಿರುವ ಅಧಿಕಾರಿಗಳು.ಸದ್ಯ ಮನೆಯಲ್ಲಿ ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ.
ಅಪಾರ ಪ್ರಮಾಣದ ಚಿನ್ನಾಭರಣ ಪತ್ತೆಯಾಗಿದ್ದು ಅಕ್ಕಸಾಲಿಗರಿಗೆ ಕಾಯುತ್ತಿರುವ ಲೋಕಾಯುಕ್ತ ಅಧಿಕಾರಿಗಳು .ಚಿನ್ನ, ಬೆಳ್ಳಿ ಪದಾರ್ಥಗಳ ಮೌಲ್ಯದ ಬಗ್ಗೆ ಮಾಹಿತಿ ಕಲೆ ಹಾಕಲು ಅಕ್ಕಸಾಲಿಗರನ್ನು ಕರೆಸುತ್ತಿರುವ ಅಧಿಕಾರಿಗಳು. ರಘುಪತಿ ಮನೆಯಲ್ಲಿ ಮುಂದುವರಿದ ಶೋಧ ಕಾರ್ಯ.ಮೈಸೂರಿನ ವಿಜಯನಗರ 4ನೇ ಹಂತದಲ್ಲಿರುವ ಭವ್ಯ ಬಂಗಲೆ.
ಡಿವೈ ಎಸ್ ಪಿ ಮಾಲತೇಶ್, ಇನ್ಸ್ ಪೆಕ್ಟರ್ ಉಮೇಶ್, ಜಯರತ್ನ, ರೂಪಾ ಅವರಿಂದ ಶೋಧ ಕಾರ್ಯ.
ನಗದು ಹಾಗೂ ಲಕ್ಷಾಂತರ ಬೆಲೆ ಬಾಳುವ ಚಿನ್ನಾಭರಣ ಪತ್ತೆ.ಮನೆಯಲ್ಲಿ ಸಿಬೆಲೆ ಬಾಳುವ ಬ್ರಾಂಡೆಡ್ ವ್ಯಾನಿಟಿ ಬ್ಯಾಗ್‌ಗಳು ಪತ್ತೆಯಾಗಿದೆ.