ಕೊಡುಗು : ಮಡಿಕೇರಿಯಲ್ಲಿ ಲೋಕಾಯುಕ್ತರು ಬೆಳಗಿನ ಜಾವ ನಾಲ್ಕು ಗಂಟೆಗೆ ಸುದರ್ಶನ ವೃತ್ತದಲ್ಲಿರುವ ಹೆಚ್ಚುವರಿ ಜಿಲ್ಲಾಧಿಕಾರಿ ನಂಜುಂಡೇಗೌಡ ಅವರ ಸರ್ಕಾರಿ ವಸತಿ ಗೃಹಕ್ಕೆ ದಾಳಿ ನಡೆಸಿ ಅಪಾರ ಜಿನ್ನಾಭರಣ ಹಾಗೂ ನಗದನ್ನು ವಶಪಡಿಸಿಕೊಂಡಿದ್ದಾರೆ.
ಅವರ ಸಂಬಂಧಿಕರ ಮನೆ ಮೈಸೂರು ಮತ್ತು ಪಿರಿಯಾಪಟ್ಟಣದಲ್ಲೂ ಕೂಡ ಏಕಕಾಲದಲ್ಲಿ ದಾಳಿ ನಡೆದು ಇನ್ನಷ್ಟೇ ಮಾಹಿತಿ ಲಭ್ಯವಾಗಬೇಕಾಗಿದೆ. ನಂಜುಂಡೇಗೌಡರು ಈ ಹಿಂದೆ ಉಪ ವಿಭಾಗಾಧಿಕಾರಿಯಾಗಿ ಸೇವಿಸಲಿಸಿ, ನಂತರ ವರ್ಗಾವಣೆಗೊಂಡು ಮತ್ತೆ ಪುನಃ ಕಳೆದ ಎರಡು ವರ್ಷದಿಂದ ಹೆಚ್ಚುವರಿ ಜಿಲ್ಲಾಧಿಕಾರಿಯಾಗಿ ಕೊಡಗಿನಲ್ಲಿ ಸೇವೆ ಸಲ್ಲಿಸುತ್ತಿದ್ದರು.. ನಂಜುಂಡೆ ಗೌಡರ ಬಳಿ, ಕೆಲವು ಮಾಧ್ಯಮದವರು ಸಂಘ ಸಂಸ್ಥೆಯ ಪ್ರತಿನಿಧಿಗಳು ಅವರಿಂದ ಧನ ಸಹಾಯವನ್ನು ಕೂಡ ಸ್ವೀಕರಿಸುತ್ತಿದ್ದರು ಎಂದು ಹೇಳಲಾಗುತ್ತಿದೆ.
ಗೊತ್ತುಪಡಿಸಿದ ವ್ಯಕ್ತಿಗಳಿಗೆ ಸಂಘ-ಸಂಸ್ಥೆ ಪ್ರತಿನಿಧಿಗಳಿಗೆ, ಕೆಲವೊಂದು ರಾಜಕೀಯ ಧುರೀಣರಿಗೆ, ಇವರ ಸಹಾಯ ಹಸ್ತ ನಿತ್ಯ ನಿರಂತರವಾಗಿತ್ತು ಎಂದು ಹೇಳಲಾಗುತ್ತಿದೆ. ಲೋಕಾಯುಕ್ತರು ಸಂಪೂರ್ಣ ತನಿಖೆ ಮಾಡಿದರೆ ಇವರಿಗೆ ಬೆಂಬಲ ನೀಡುತ್ತಿದ್ದವರ ಬಣ್ಣ ಬಯಲಾಗಬಹುದಾಗಿದೆ. ಕೊಡಗಿನಲ್ಲಿ ಇಂತಹ ಹಲವಾರು ಅಧಿಕಾರಿಗಳು ಭ್ರಷ್ಟಾಚಾರದಲ್ಲಿ ತೊಡಗಿಸಿಕೊಂಡಿದ್ದು, ಕೆಲವರು ಕಂದಾಯ ಇಲಾಖೆಯಲ್ಲಿ ಅಧಿಕಾರಿಯಾಗಿ ಸೇವೆ ಸಲ್ಲಿಸಿ ನಿವೃತ್ತಿಯಾದ ನಂತರವು ಕೂಡ ತಮ್ಮ ಅಧಿಕಾರವನ್ನು ಚಲಾಯಿಸಿ ಬ್ರೋಕರ್ ಕೆಲಸ ನಿರ್ವಹಿಸುತ್ತಾ ಸರ್ಕಾರಿ ಉದ್ಯೋಗ್ಸ್ತರಿಗೆ ಆಮಿಷ ಒಡ್ಡಿ ಬಾರಿ ದಂಧೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಒಟ್ಟಿನಲ್ಲಿ ಜಿಲ್ಲೆಯಲ್ಲಿ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಮುಂದಾಗಿರುವ ಇಬ್ಬರು ಶಾಸಕರ ಕೆಲಸ ಕಾರ್ಯಗಳಿಗೆ ಇಂತಹ ದಾಳಿಗಳಿಂದ ಆಡಳಿತದಲ್ಲಿ ಬಿಗಿ ತರಲು ಕಾರಣವಾಗಬಹುದು ಎಂದು ಹೇಳಲಾಗುತ್ತಿದೆ.