ಮೈಸೂರು : ನಾನು ಮೈಸೂರು ಬಾರ್ಅಸೋಸಿಯೇಷನ್ ಸೆಕ್ರೆಟರಿ ಆಗಿದ್ದೆ.ಹೊಸದಾಗಿ ನಾನು ಲಾಯರ್ ಆಗಿದ್ದಾಗ ಹಿರಿಯರು ನ್ಯಾಯ ಕೊಡಿಸಲು ಕಥೆ ಹೇಳುತ್ತಿದ್ದರು
ಕಕ್ಷಿದಾರರು ವಕೀಲರ ಬಳಿ ಬಂದಾಗ ನಡೆದ ಘಟನೆಯನ್ನೂ ಸಿಎಂ ಸಿದ್ದರಾಮಯ್ಯ ನೆನಪಿಸಿಕೊಂಡಿದ್ದಾರೆ.
ಮೇಲಿನ ರ‌್ಯಾಕ್‌ನ ದಪ್ಪ ಪುಸ್ತಕಗಳು ನೋಡಿ ವಾದ ಮಾಡಿದ್ರೆ ನೂರಕ್ಕೆ ನೂರು ಕೇಸ್ ಗೆದ್ದ ಹಾಗೆ.
ಎರಡನೇ ಸಾಲಿನ ಪುಸ್ತಕ ಓದಿ ವಾದ ಮಾಡಿದ್ರೆ ಕೇಸ್ ಗೆಲ್ಲಬಹುದು, ಸೋಲಬಹುದು.ಮೂರನೇ ಲೈನ್ ಚಿಕ್ಕ ಪುಸ್ತಕ ನೋಡಿ ವಾದ ಮಾಡಿದ್ರೆ ಸೋಲು ಗ್ಯಾರಂಟಿ ಕಣಯ್ಯಾ ಅಂತಿದ್ರು.ಕೆಳ ಜಾತಿಯವರು ಲಾಯರ್ ಆಗುವುದು ಬೇಡ ಅಂತಿದ್ರು.ನಮ್ಮೂರಿನ ಚೆನ್ನಪ್ಪಯ್ಯ ಅಂತಿದ್ದರು.ಆ ಶಾನುಭೋಗರನ್ನ ನಮ್ಮಪ್ಪ ಕೇಳಿದ್ದರು.
ಆವಾಗ ಕುರುಬರು ಲಾಯರ್ ಓದಬಾರದು ಅಂತ ಅಂದಿದ್ದರು.ಅವರ ಮಾತು ಕೇಳಿಕೊಂಡು ನಮ್ಮಪ್ಪ ಓದಬೇಡ ಅಂದರು.ಅವರ ಮಾತು ಕೇಳಿದ್ದರೆ ನಾನು ಲಾಯರ್ ಆಗಲು ಸಾಧ್ಯವಾಗಲು ಆಗುತ್ತಿರಲಿಲ್ಲ.
ರಾಜ್ಯದ ಸಿಎಂ ಕೂಡ ಆಗುತ್ತಿರಲಿಲ್ಲ.
ಅಂತಹ ಪಟ್ಟಭದ್ರ ಹಿತಾಶಕ್ತಿಗಳು ಎಲ್ಲಾ ಕಾಲದಲ್ಲೂ ಇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು