ಮೈಸೂರು : ಸ್ಮಶಾನಕ್ಕೆ ಒತ್ತಾಯಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿರುವ ಘಟನೆ ಸಮಾಜ ಕಲ್ಯಾಣ ಸಚಿವ ಡಾಕ್ಟರ್ ಹೆಚ್. ಸಿ ಮಹದೇವಪ್ಪ ಪ್ರತಿ ನಿಧಿಸುವ ಕ್ಷೇತ್ರ ನರಸೀಪುರ ತಾಲ್ಲೂಕಿನ ನರೀಪುರ ಗ್ರಾಮದಲ್ಲಿ ನಡೆದಿದೆ.
ಶವ ಇಟ್ಟು ಪ್ರತಿಭಟನೆ ನಡೆಸಿರುವ ಗ್ರಾಮಸ್ಥರು ಆಕ್ರೋಶ ಹೊರ ಹಾಕಿದ್ದಾರೆ. ದೇಶಕ್ಕೆ ಸ್ವತಂತ್ರ ಬಂದು 75ವರ್ಷ ಕಳೆದಿದೆ.ಇಂದಿಗೂ ಸಹ ಅನೇಕ ಕಡೆ ಮನಷ್ಯರು ಸತ್ತಾಗ ಹೂಳಲು ಸ್ಮಶಾನವಿಲ್ಲ.ಸ್ಮಶಾನದವಿಲ್ಲದೆ ಎಲ್ಲಿ ಅಂತಿಮ ಸಂಸ್ಕಾರ ಮಾಡಬೇಕೆಂಬುದೇ ತಿಳಿಯುತ್ತಿಲ್ಲ.
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್ ರನ್ನ ತರಾಟೆಗೆ ತೆಗೆದುಕೊಂಡಿದ್ದಾರೆ.
ಅಧಿಕಾರಿಗಳನ್ನ ಕರೆದು ಸಭೆ ನಡೆಸುತ್ತೇನೆ.
ಎಲ್ಲೆಲ್ಲಿ ಸ್ಮಶಾನದ ಕೊರತೆ ಇದೆ ಎಂಬ ಮಾಹಿತಿ ಪಡೆಯುತ್ತೇನೆ.ಸ್ಮಶಾನ ಜಾಗದ ಸಮಸ್ಯೆ ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ತಹಸೀಲ್ದಾರ್ ಸುರೇಶ್ ಆಚಾರ್ ಭರವಸೆ ನೀಡಿದ್ದಾರೆ
ಭರವಸೆ ಮೇರೆಗೆ ಪ್ರತಿಭಟನೆ ಗ್ರಾಮಸ್ಥರು ಕೈ ಬಿಟ್ಟಿದ್ದಾರೆ.