ಮೈಸೂರು : ಸಚಿವ ಚೆಲುವರಾಯಸ್ವಾಮಿ ವಿರುದ್ಧ ಅಧಿಕಾರಿಗಳು ರಾಜ್ಯಪಾಲರಿಗೆ ಪತ್ರ ಬರೆದ ವಿಚಾರಕ್ಕೆ ಸಚಿವ ಕೃಷ್ಣಭೈರೇಗೌಡ ಪ್ರತಿಕ್ರಿಯೆ ನೀಡಿದ್ದಾರೆ.
ಕಾಂಗ್ರೆಸ್ ಸರ್ಕಾರದ ವಿರುದ್ಧ ವ್ಯವಸ್ಥಿತ ಷಡ್ಯಂತ್ರ ನಡೆಯುತ್ತಿದೆ.ಸುಳ್ಳು ದಾಖಲೆ ಪತ್ರಗಳನ್ನ ಸೃಷ್ಟಿ ಮಾಡಿ ಸರ್ಕಾರಕ್ಕೆ ಅಪಪ್ರಚಾರ ಮಾಡುವ ವ್ಯವಸ್ಥಿಯ ಷಡ್ಯಂತ್ರ ನಡೆಯುತ್ತಿದೆ.ಶಾಸಕರನ್ನ ಪತ್ರ ಸಹ ನಕಲಿ ಮಾಡಿದ್ದರು.
ಇದಕ್ಕೆ ವ್ಯಾಪಕ ಪ್ರಚಾರ ಸಹ ಸಿಕಿತ್ತು.ನಕಲಿ ಪತ್ರ ಅಂತ ಗೊತ್ತಿದ್ರು ವ್ಯಾಪಕ ಪ್ರಚಾರ ಸಿಕ್ತು.ಚೆಲುವರಾಯಸ್ವಾಮಿ ವಿಚಾರದಲ್ಲೂ ಈಗಾಗಲೇ ಅಧಿಕಾರಿಗಳೇ ಸ್ಪಷ್ಟ ಪಡಿಸಿದ್ದಾರೆ.ಪತ್ರ ನಾವು ಬರೆದಿಲ್ಲ, ಅದು ನಕಲಿ ಅಂಥ.
ಈ ವಿಚಾರವೇ ನಮಗೆ ಗೊತ್ತಿಲ್ಲ ಅಂಥ ಅಧಿಕಾರಿಗಳು ಹೇಳಿದ್ದಾರೆ ಎಂದರು.
ನಕಲಿ ದಾಖಲೆ ಸೃಷ್ಟಿ ಮಾಡಿ ಜನರಿಗೆ ಸರ್ಕಾರದ ಮೇಲೆ ಕೆಟ್ಟ ಹೆಸರು ತರಲು ಕೆಲವರು ಪ್ರಯತ್ನ ಮಾಡುತ್ತಿದ್ದಾರೆ.
ಇದೊಂದು ರಾಜಕೀಯ ಆಟ.ಇದನ್ನ ರಾಜಕೀಯವಾಗಿಯೇ ಫೇಸ್ ಮಾಡುತ್ತೇವೆ.
ಅಧಿಕಾರಿಗಳಿಗೆ ತೊಂದರೆ ಆದ್ರೆ ನೇರವಾಗಿ ಲೋಕಯುಕ್ತಗೆ ದೂರು ನೀಡಬಹುದು.
ಕಾಂಗ್ರೆಸ್ ಸರ್ಕಾರ ಬಂದ ಮೇಲೆ ವಿರೋಧ ಪಕ್ಷದವರಿಗೆ ಸರ್ಕಾರದ ಜನಪ್ರಿಯತೆ ಸಹಿಸಲು ಸಾಧ್ಯವಾಗುತ್ತಿಲ್ಲ.
ಕೊಟ್ಟ ಮಾತನ್ನ ರಾಜ್ಯ ಸರ್ಕಾರ ಇಡೇರಿಸಿದೆ.
5 ವರ್ಷವಾದ್ರು ಗ್ಯಾರೆಂಟಿ ಜಾರಿ ಮಾಡಲು ಸಾಧ್ಯವಿಲ್ಲ ಅಂದ್ರು.ಸರ್ಕಾರ ಬಂದ ಎರೆಡೇ ತಿಂಗಳಲ್ಲಿ ಗ್ಯಾರೆಂಟಿ ಯೋಜನೆ ಜಾರಿಗೆ ತಂದಿದ್ದೇವೆ ಎಂದು ಸಚಿವ ಕೃಷ್ಣ ಭೈರೇಗೌಡ ಹೇಳಿದರು.