ಬೆಂಗಳೂರು : ಸಚಿವರು ಶಾಸಕರುಗಳ ನಡುವೆ ವೈಮನಸ್ಸು ವಿಚಾರಕ್ಕೆ ಸಂಭಂದಿಸಿದಂತೆ ಸಿಎಂ ಸಿದ್ದರಾಮಯ್ಯ ಶಾಸಕರ ಜೊತೆ ಸಭೆಯನ್ನು ಮುಂದುವರೆಸಿದ್ದಾರೆ.
ನೆನ್ನೆಯಷ್ಟೇ 6ಜಿಲ್ಲೆಗಳ ಸಚಿವರು ಶಾಸಕರುಗಳ ಜೊತೆ ಪ್ರತ್ಯೇಕವಾಗಿ ಜಿಲ್ಲಾವಾರು ಸಭೆ ನಡೆಸಿರುವ ಸಿಎಂ
ಇಂದು ಸಹ 6ಜಿಲ್ಲೆಗಳ ಸಚಿವರು ಶಾಸಕರ ಸಭೆ ಕರೆದಿದ್ದಾರೆ.
ರಾಯಚೂರು,ವಿಜಯಪುರ,ಕೊಪ್ಪಳ,ಬೆಳಗಾವಿ,ಹಾವೇರಿ,ಕಲಬುರಗಿ ಜಿಲ್ಲೆಯ ಸಚಿವರು ಶಾಸಕರು ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಸಿಎಂ ನಿವಾಸ ಕೃಷ್ಣಾದಲ್ಲಿ ಸಭೆ ನಡೆಯಲಿದೆ. ಸಚಿವರು ಶಾಸಕರ ನಡುವೆ ಸಮನ್ವಯತೆ ಕಾಪಾಡಿಕೊಳ್ಳುವಂತೆ ಸಿಎಂ ಸಲಹೆ ನೀಡುತ್ತಿದ್ದಾರೆ ಎಂದು ತಿಳಿದುಬಂದಿದೆ ಅಲ್ಲದೆ ಅನುದಾನ ಬಿಡುಗಡೆ,ಕ್ಷೇತ್ರದ ಸಮಸ್ಯೆ ಕುರಿತು ಶಾಸಕರು ತಮ್ಮ ಅಳಲು ತೋಡಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ಸಭೆಯಲ್ಲಿ ಭಾಗಿಯಾಗಲಿರುವ ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ಇತರೆ ಸಚಿವರು ಸಹ ಭಾಗಿಯಾಗಲಿದ್ದಾರೆ.