ಮೈಸೂರು : ಚಾಮರಾಜನಗರ ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ನಿಂದ ಅಚ್ಚರಿ ಅಭ್ಯರ್ಥಿ ಕಣಕ್ಕಿಳಿಯೋ ಸಾಧ್ಯತೆಯಿದ್ದು ಲೋಕಸಭಾ ಚುನಾವಣೆಗೆ ಚಾಮರಾಜನಗರ ಕ್ಷೇತ್ರದಿಂದ ಹೆಚ್ ಸಿ ಮಹದೇವಪ್ಪ ಸ್ಪರ್ದೆ ಮಾಡ್ತಾರ ಎಂಬ ಪ್ರಶ್ನೆ ಎದ್ದಿದೆ.
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಚಾಮರಾಜನಗರ ಲೋಕಸಭಾ ಕ್ಷೇತ್ರದಿಂದ ಸಚಿವ ಮಹದೇವಪ್ಪ ಸ್ಪರ್ಧೆ ಮಾಡೋ ಪ್ಲಾನ್ ಮಾಡಿದ್ದಾರೆ ನರಸೀಪುರ ಕ್ಷೇತ್ರದಿಂದ ಸುನಿಲ್ ಬೋಸ್ ಕಣಕ್ಕಿಳಿಸಲು ತಯಾರಿ ನಡೆಸುತ್ತಿದ್ದಾರೆ ಎನ್ನಲಾಗಿದೆ.
ಒಂದೇ ಕಲ್ಲಲ್ಲಿ ಎರಡು ಹಕ್ಕಿ ಒಡೆಯಲು ಪ್ಲಾನ್ ಮಾಡಿದ್ದು, ಒಂದು ಕಡೆ ಪುತ್ರ ಸುನಿಲ್ ಬೋಸ್ ಗೆ ರಾಜಕೀಯ ಭವಿಷ್ಯ ನೀಡಲು ಮತ್ತೊಂದು ಕಡೆ ಲೋಕಸಭಾ ಚುನಾವಣೆಯಲ್ಲಿ ಗೆಲ್ಲುವ ಮೂಲಕ ದಲಿತ ನಾಯಕತ್ವ ಪಟ್ಟ ಪಡೆಯೋಕೆ ಸಿದ್ಧತೆ ನಡೆದಿದೆ ಎಂದು ತಿಳಿದು ಬಂದಿದೆ. ಸದ್ಯ ಚಾಮರಾಜನಗರ ಲೋಕಸಭಾ ಕ್ಷೇತ್ರಕ್ಕೆ ಅಭ್ಯರ್ಥಿ ಹುಡುಕಾಟದಲ್ಲಿರೋ ಕಾಂಗ್ರೆಸ್ ಗೆ
ಪ್ರಸ್ತುತ ಚಾಮರಾಜನಗರ ಲೋಕಸಭಾ ಕ್ಷೇತ್ರಕ್ಕೆ ಹಲವು ನಾಯಕರ ಹೆಸರು ಮುಂಚೂಣಿಯಲ್ಲಿದೆ.
ಸುನಿಲ್ ಬೋಸ್,ಮಾಜಿ ಶಾಸಕ ಜಿ.ಎನ್.ನಂಜುಂಡಸ್ವಾಮಿ,ಕೆಪಿಸಿಸಿ ಮಹಿಳಾ ಅಧ್ಯಕ್ಷೆ ಪುಷ್ಪಾ ಅಮರನಾಥ್ ಹೆಸರು ಮುಂಚೂಣಿಗೆ ಬಂದಿದೆ ಆದರೆ ಇದೀಗ ಮತ್ತೆ ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ಮಹದೇವಪ್ಪ ಹೆಸರು ಮುನ್ನಲೆಗೆ ಬಂದಿದೆ.
ಪುತ್ರ ಸುನಿಲ್ ಬೋಸ್ ಗೆ ಎಂಪಿ ಟಿಕೆಟ್ ಸಿಕ್ಕರೆ ಸೋಲಿನ ಭಯ ಎದುರಾಗಿದ್ದು, ಆಗಾಗಿ ತಾವೇ ಎಂಪಿ ಚುನಾವಣೆಗೆ ಸ್ಪರ್ಧೆ ಮಾಡುವಂತೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸಲಹೆ ನೀಡಿದ್ದಾರೆ ಎನ್ನಲಾಗಿದೆ. ರಾಜ್ಯದಲ್ಲಿ ಎಸ್ಸಿ ಸಮುದಾಯದಲ್ಲಿ ಇರುವ ಏಕೈಕ ಹಿರಿಯ ನಾಯಕ ಮಹದೇವಪ್ಪ.ರಾಜ್ಯದಲ್ಲಿ ದಲಿತ ಸಂಘಟನೆಗಳನ್ನ ಒಗ್ಗೂಡಿಸಬಲ್ಲ ಶಕ್ತಿ ಮಹದೇವಪ್ಪ ಅವರಿಗಿದೆ. ಅಲ್ಲದೆ
ಜೊತೆಗೆ ಹಳೆ ಮೈಸೂರು ಭಾಗದಲ್ಲಿ ಹಿಡಿತ ಹೊಂದಿರುವ ಪ್ರಭಾವಿ ನಾಯಕ ಕೂಡ ಆಗಿದ್ದಾರೆ. ಹಾಗಾಗಿ ಹಳೆ ಮೈಸೂರು ಭಾಗದ ಉಸ್ತುವಾರಿ ಮಹದೇವಪ್ಪ ಹೆಗಲಿಗೆ ಬೀಳುವ ಸಾದ್ಯತೆ ಹೆಚ್ಚಿದೆ.
ಶಾಸಕ ದರ್ಶನ್ ದ್ರುವನಾರಾಯಣ್ ರನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡಿಸಿ,ಎಂಪಿ ಚುನಾವಣೆಗೆ ನಿಲ್ಲಿಸೋ ತಯಾರಿ ಸಹ ನಡೆದಿತ್ತು.ದರ್ಶನ್ ದ್ರುವನಾರಾಯಣ್ ರಾಜೀನಾಮೆಯಿಂದ ತೆರವಾಗುವ ಸ್ಥಾನಕ್ಕೆ ಸುನಿಲ್ ಬೋಸ್ ಕರೆ ತರೋ ಚಿಂತನೆ ನಡೆದಿತ್ತು. ಇದೀಗ ಸ್ವತಃ ಮಹದೇವಪ್ಪನವರೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಎಂಪಿ ಚುನಾವಣೆಗೆ ನಿಲ್ಲುವ ಸಾಧ್ಯತೆಯನ್ನೂ ಸಹ ತಳ್ಳಿ ಹಾಕುವಂತಿಲ್ಲ. ಇದರ ಹಿಂದೆ ಕೇಂದ್ರದಲ್ಲಿ ಮಲ್ಲಿಕಾರ್ಜುನ ಖರ್ಗೆ ಕೈ ಬಳಪಡಿಸೋ ಪ್ಲಾನ್ ಕೂಡ ಇದೆ. ಆ ಮೂಲಕ ಕೇಂದ್ರ ರಾಜಕಾರಣಕ್ಕೆ ಮಹದೇವಪ್ಪ ಎಂಟ್ರಿ ಕೊಡೊ ತಯಾರಿ ತೆರೆಮೆಯಲ್ಲಿ ನಡೆಯುತ್ತಿದೆ ಎನ್ನಲಾಗ್ತಿದೆ.
ಪುತ್ರ ಸುನಿಲ್ ಬೋಸ್ ರನ್ನ ಶಾಸಕರನ್ನಾಗಿ ಮಾಡಿ ರಾಜ್ಯ ರಾಜಕಾರಣಕ್ಕೆ ತಂದು, ಸಿಎಂ ಸಿದ್ದರಾಮಯ್ಯಗೆ ಪ್ರತಿಷ್ಠೆಯಾಗಿರುವ ಮೈಸೂರು, ಚಾಮರಾಜನಗರ ಲೋಕಸಭಾ ಕ್ಷೇತ್ರಗಳನ್ನೂ ಕಾಂಗ್ರೆಸ್ ತೆಕ್ಕೆಗೆ ತೆಗೆದುಕೊಂಡು ಆಪ್ತ ಮಹದೇವಪ್ಪ ಮೂಲಕ ಹಳೆ ಮೈಸೂರು ಭಾಗದಲ್ಲಿ ಹಿಡಿತ ಸಾದಿಸಲು ಸಿದ್ದು ಮಾಸ್ಟರ್ ಪ್ಲಾನ್ ಮಾಡಿದ್ದಾರೆ ಎಂದು ರಾಜಕೀಯ ವಲಯದಲ್ಲಿ ಚರ್ಚೆಗಳು ನಡೆಯುತ್ತಿವೆ.