ಮೈಸೂರು : ಸೆಕೆಂಡ್ ಹ್ಯಾಂಡ್ ಮೊಬೈಲ್ ಖರೀದಿಸುವ ಮುನ್ನ ಹುಷಾರ್ ಆಗಿರಿ ಕದ್ದ ಮೊಬೈಲ್ ಕೊಟ್ಟು ಯಾಮಾರಿಸಬಹುದು ಎಂದು ಮೈಸೂರು ಪೊಲೀಸ್ ಕಮಿಷನರ್ ರಮೇಶ್ ಬನೋತ್ ತಿಳಿಸಿದರು.
ನಗರದಲ್ಲಿ ಕಳ್ಳತನವಾದ ಮೊಬೈಲ್ ಗಳಲ್ಲಿ ಸುಮಾರು 135 ಫೋನ್ ಗಳನ್ನು ಕಳ್ಳರಿಂದ ವಶ ಪಡಿಸಿಕೊಂಡು ಮಾತನಾಡಿದ ಅವರು, ಕಳ್ಳ ಫೋನ್ ಬಳಸುತ್ತಿದ್ದರೆ ಪೊಲೀಸರ ಕಾಲ್ ಬರುತ್ತೆ.ಮೊಬೈಲ್ ಖರೀದಿಗೂ ಮುನ್ನ ಎಚ್ಚರವಾಗಿರಿ ಯಾರದ್ದೋ ಮೊಬೈಲ್ ಬಳಸಿದ್ರೆ ಸಿಕ್ಕಿ ಬೀಳೋದು ಗ್ಯಾರಂಟಿ ಎಂದರು.
ಸಿಇಐಆರ್ ಪೋರ್ಟಲ್ ಮೂಲಕವೇ ಮೊಬೈಲ್ ಜಪ್ತಿ ಮಾಡಲಾಗಿದ್ದು, ಬರೋಬ್ಬರಿ 135 ಮೊಬೈಲ್ ಫೋನ್ ಅನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.
ಪತ್ತೆಯಾದ ಫೋನ್ಗಳು ವಾರಸುದಾರರಿಗೆ ವಾಪಸ್ ಕೊಡಲಾಯಿತು.
ಮೊಬೈಲ್ ಕಳೆದುಕೊಂಡವರಿಗೆ ಸಿಇಐಆರ್ ಆಶಾಕಿರಣವಾಗಿದೆ. ಒಂದು ವೇಳೆ ಮೊಬೈಲ್ ಕಳೆದುಕೊಂಡರೆ ನೀವು ಕೆಳಕಂಡ ಕೆಲಸ ಮಾಡಿ
(ಸಿಇಐಆರ್ ಅಂದ್ರೆ ಸೆಂಟ್ರಲ್ ಎಕ್ಯುಪ್ಮೆಂಟ್ ಐಡೆಂಟಿಟಿ ರಿಜಿಸ್ಟರ್.)
6363255135ಗೆ ವಾಟ್ಸಪ್ನಲ್ಲಿ Hi ಮಾಡಿದ್ರೆ ಲಿಂಕ್ ಓಪನ್ ಆಗತ್ತೆಪ್ರಾಥಮಿಕ ಮಾಹಿತಿ ನೀಡಿದ್ರೆ ಕೇಸ್ ದಾಖಲಾಗಿ, ಯಾವಾಗ ಫೋನ್ ಆನ್ ಆದರೂ ಪೊಲೀಸರಿಗೆ ಸಿಗ್ನಲ್ ಸಿಗುತ್ತದೆ ನಂತರ
ಕದ್ದ ಫೋನ್ ಬಳಸುತ್ತಿದ್ದರೆ ಪೊಲೀಸ್ ಠಾಣೆಗೆ ಒಪ್ಪಿಸಲೇಬೇಕು.ಕಡಿಮೆ ಬೆಲೆಗೆ ಒಳ್ಳೆಯ ಫೋನ್ ಕೊಟ್ಟರೆ ಕೇರ್ಫುಲ್ ಆಗಿರಿ ಎಂದು ಮೈಸೂರು ನಗರ ಪೋಲೀಸ್ ಕಮಿಷನರ್ ರಮೇಶ್ ಬಾನೊತ್ ಮಾಹಿತಿ ನೀಡಿದರು