ಮೈಸೂರು : ವೀಲಿಂಗ್ ಶೋಕಿಗಾಗಿ ಬೈಕ್ ಗಳ ಕಳ್ಳತನ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ
ಧನುಷ್ (19), ನಿತಿನ್ (19) ಬಂಧಿತ ಆರೋಪಿಗಳು.
ಬಂಧಿತ ಆರೋಪಿಗಳಿಂದ 2.5ಲಕ್ಷ ಮೌಲ್ಯದ 4ಬೈಕ್ ವಶಕ್ಕೆ ಪಡೆಯಲಾಗಿದೆ. ಕುವೆಂಪುನಗರ ಠಾಣೆ ಪೋಲೀಸರು ಯಶಸ್ವಿ ಕಾರ್ಯಾಚರಣೆ ನಡೆಸಿದ್ದಾರೆ.
ಮೈಸೂರಿನ ಶ್ರೀರಾಂಪುರದಲ್ಲಿ ಬೈಕ್ ಕಳ್ಳತನ ಮಾಡುವ ವೇಳೆ ಆರೋಪಿಗಳು ಸಿಕ್ಕಿ ಬಿದ್ದಿದ್ದಾರೆ.
ಒಂದು ಬೈಕ್ ಕದ್ದು ಅದೇ ಬೈಕ್ ನಲ್ಲಿ ತೆರಳಿ ಮತ್ತೊಂದು ಬೈಕ್ ಕದಿಯಲು ಸಂಚು ಹಾಕಿದ್ದ ಕಳ್ಳರು.
ಈ ವೇಳೆ ಪೋಲೀಸರ ಕೈಗೆ ಸಿಕ್ಕಿ ಬಿದ್ದಿರುವ ಕಳ್ಳರು.
ವಿಚಾರಣೆ ವೇಳೆ ಬೈಕ್ ವೀಲಿಂಗ್ ಮಾಡುವ ಸಲುವಾಗಿ ಬೈಕ್ ಕಳ್ಳತನ ಮಾಡುತ್ತಿದ್ದ ಸತ್ಯ ಬಯಲಿಗೆ ಬಂದಿದೆ.
ವಿದ್ಯಾರಣ್ಯಪುರಂ ಠಾಣೆ,ಕುವೆಂಪುನಗರ ಠಾಣೆ,ವ್ಯಾಪ್ತಿಯಲ್ಲಿ ತಲಾ ಒಂದು ಕಳವು ಪ್ರಕರಣ ದಾಖಲಾಗಿದ್ದು, ಆಲನಹಳ್ಳಿ ಪೋಲೀಸ್ ಠಾಣೆಯಲ್ಲಿ ಎರಡು ಪ್ರಕರಣಗಳು ಪತ್ತೆಯಾಗಿವೆ.
ಪೋಲೀಸರ ಕಾರ್ಯಕ್ಕೆ ನಗರ ಪೋಲೀಸ್ ಆಯುಕ್ತ ರಮೇಶ್ ಬಾನೊತ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ