ಮೈಸೂರು : ಮಾಜಿ ಸಚಿವ ಆರಗ ಜ್ಞಾನೇಂದ್ರ ಹೇಳಿಕೆ ವಿಚಾರ ಶಾಸಕ ಶ್ರೀವತ್ಸ ಪ್ರತಿಕ್ರಿಯೆ ನೀಡಿದ್ದಾರೆ
ಮಾತಿನ ಭರಾಟೆಯಲ್ಲಿ ಈ ರೀತಿಯ ಹೇಳಿಕೆ ಹೊರ ಬಂದಿದೆ ಈ ರೀತಿಯ ಪದ ಬಳಕೆ ಯಾರೇ ಮಾಡಿದ್ರು ತಪ್ಪು ಎಂದರು.
ಶಾಸಕರಾದ ಬಳಿಕ ನಮಗೆ ನಡವಳಿಕೆ, ಪದಬಳಕೆ ಹಾಗೂ ಸದನದ ಒಳಗಿನ ವರ್ತನೆ ಬಗ್ಗೆ ಮೊದಲ ಪಾಠವೇ ಇರುತ್ತದೆ.ಕಾಂಗ್ರೆಸ್ ಯಾವ ವಿಚಾರಗಳನ್ನ ಗಂಭೀರವಾಗಿ ಪರಿಗಣಿಸಬೇಕೋ ಅದನ್ನ ಕಡೆಗಣಿಸಿದೆ.
ಗ್ರಾನೈಟ್ ಸಿಕ್ಕರೂ ಭಯೋತ್ಪಾದಕ ಅಲ್ಲ ಎನ್ನುತ್ತಾರೆ.
ಉಡುಪಿ ಕಾಲೇಜು ಪ್ರಕರಣವನ್ನ ಹುಡುಗಾಟ ಎನ್ನುತ್ತಾರೆ.
ಗೋಹತ್ಯೆ ನಿಷೇಧ ಕಾಯ್ದೆ ವಾಪಾಸ್ ತೆಗೆದುಕೊಳ್ಳುತ್ತೇವೆ ಎನ್ನುತ್ತಾರೆ ಎಂದು ಕಾಂಗ್ರೆಸ್ ವಿರುದ್ಧ ಕಿಡಕಾರಿದರು.
ಇಂತಹ ವಿಚಾರಗಳ ಬಗ್ಗೆ ನಾವು ಹೋರಾಡುತ್ತೇವೆ.
ಆರಗ ಜ್ಞಾನೇಂದ್ರ ಹಿರಿಯರು, ಅವರ ಬಗ್ಗೆ ಮಾತನಾಡುವಷ್ಟು ದೊಡ್ಡವನಲ್ಲ.
ಆದರೆ ಮಾತನಾಡುವಾಗ ಪದ ಬಳಕೆಯ ಬಗ್ಗೆ ಜಾಗ್ರತೆ ವಹಿಸಬೇಕು ಎಂದಷ್ಟೇ ಹೇಳಬಹುದು ಎಂದು
ಶಾಸಕ ಟಿ ಎಸ್ ಶ್ರೀವತ್ಸ ಹೇಳಿದರು.