ಮೈಸೂರು : ಸುತ್ತೂರು ಮಠದ ಪರಂಪರೆಗೆ ದಸರಾ ಉದ್ಘಾಟನೆಯ ಅವಕಾಶ ಕೊಡಿ ಎಂದು ಕೆ.ಆರ್ ಕ್ಷೇತ್ರದ ಶಾಸಕ ಟಿ ಎಸ್ ಶ್ರೀವತ್ಸ ಸರ್ಕಾರಕ್ಕೆ ಮನವಿ ಮಾಡಿದರು.
ಸುತ್ತೂರು ಸಂಸ್ಥಾನಕ್ಕೆ ದೊಡ್ಡ ಪರಂಪರೆ ಇದೆ.
ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಗಳು ಹಿರಿಯರು.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಠ ಮತ್ತು ಸ್ವಾಮೀಜಿ ಹೆಸರು ಗಳಿಸಿದ್ದಾರೆ.ನಮ್ಮದೇ ಜಿಲ್ಲೆಯವರಿಗೆ ಅವಕಾಶ ಸಿಗಬೇಕು.ಈ ನಿಟ್ಟಿನಲ್ಲಿ ಸಿಎಂ ಅಧ್ಯಕ್ಷತೆಯಲ್ಲಿ ನಡೆದ ದಸರಾ ಉನ್ನತ ಮಟ್ಟದ ಸಭೆಯಲ್ಲಿ ಹೆಸರು ಪ್ರಸ್ತಾಪ ಮಾಡಿದ್ದೇನೆ ಎಂದರು.
ಬೇರೆ ಯಾವುದೇ ಹೆಸರು ಈವರೆಗೆ ಪ್ರಸ್ತಾಪವಾಗಿಲ್ಲ.
ಸುತ್ತೂರು ಶ್ರೀಗಳ ಹೆಸರನ್ನೇ ಫೈನಲ್ ಮಾಡಬೇಕು ಎಂದು ಮನವಿ ಮಾಡುತ್ತೇನೆ ಸರ್ಕಾರದ ಮುಂದೆ ಇದೇ ನನ್ನ ಮನವಿ ಎಂದರು.