ಮೈಸೂರು : ಸರ್ಕಾರದ ವಿರುದ್ಧ ಕಾಂಗ್ರೆಸ್ ಶಾಸಕರ ಅಸಮಾಧಾನ ವಿಚಾರಕ್ಕೆ ಶಾಸಕ ಜಿಟಿ ದೇವೇಗೌಡ ನಗರದಲ್ಲಿಂದು ಪ್ರತಿಕ್ರಿಯೆ ನೀಡಿದರು.
ಕೇವಲ ಬಿಜೆಪಿ ಜೆಡಿಎಸ್ ನಾಯಕರು ಮಾತ್ರವಲ್ಲ.
ಕಾಂಗ್ರೆಸ್ ಶಾಸಕರಿಗೂ ಸರ್ಕಾರದ ಮೇಲೆ ಅಸಮಾಧಾನವಿದೆ.ಕಾಂಗ್ರೆಸ್ ಶಾಸಕಾಂಗ ಪಕ್ಷದಲ್ಲಿ 30ಕ್ಕೂ ಹೆಚ್ಚು ಶಾಸಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸರ್ಕಾರ ಕ್ಷೇತ್ರಗಳಿಗೆ ಅನುದಾನ ಬಿಡುಗಡೆ ಮಾಡಿಲ್ಲ ಎಂದರು.
ಗ್ಯಾರಂಟಿ ಯೋಜನೆಗಳಿಗೆ ಹಣ ಕೃಡೀಕರಣ ವಿಚಾರಕ್ಕೆ ಮಾತನಾಡಿ, ಸರ್ಕಾರಕ್ಕೆ ಆದಾಯ ಕೃಡೀಕರಣ ಮಾಡಲು ಯಾವುದೇ ಸಮಸ್ಯೆಯಿಲ್ಲ.ಯಾವುದಾದರು ಮೂಲದಿಂದ ಗ್ಯಾರಂಟಿ ಯೋಜನೆಗಳಿಗೆ ಹಣ ಕೃಡೀಕರಣ ಮಾಡಬಹುದು. ನಾನು ಸಹ ಕಾಂಗ್ರೆಸ್ ಗ್ಯಾರಂಟಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದೇನೆ. ಮುಂದಿನ ದಿನಗಳಲ್ಲಾದರೂ ಅನುದಾನ ಕೊಡುತ್ತಾರೆ ಎಂಬ ವಿಶ್ವಾಸವಿದೆ ಕಾಯೋಣ ಎಂದು ಹೇಳಿದರು.
ಸರ್ಕಾರ ಬೀಳಿಸಲು ಕುಮಾರಸ್ವಾಮಿ ಪ್ರಯತ್ನ ವಿಚಾರಕ್ಕೆ ಪ್ರತಿಕ್ರಿಯಿಸಿ ಕಾಂಗ್ರೆಸ್ ನಲ್ಲಿ 135ಶಾಸಕರು ಇದ್ದಾರೆ.
ಸರ್ಕಾರ ಬೀಳಿಸಲು ಆಗುತ್ತಾ,ಆಗಲ್ಲ.ಕುಮಾರಸ್ವಾಮಿ ದೇವೇಗೌಡರು ಯಾವುದೇ ಸರ್ಕಾರವನ್ನ ಬೀಳಿಸಿಲ್ಲ
ಸರ್ಕಾರ ಬೀಳಿಸಕ್ಕೂ ಹೋಗಲ್ಲ.ಸರ್ಕಾರ ಹಳಿ ತಪ್ಪಿದಾಗ ಎಚ್ಚರಿಸುವ ಕೆಲಸ ಮಾಡುತ್ತ ಬಂದಿದ್ದಾರೆ.ಮುಂದಿನ ದಿನಗಳಲ್ಲಿಯು ಮುಂದುವರೆಸುತ್ತಾರೆ. ಕುಮಾರಸ್ವಾಮಿಯವರ ಹೋರಾಟಕ್ಕೆ ಬೆಂಬಲ ಸೂಚಿಸುತ್ತೇವೆ ಎಂದು ಶಾಸಕ ಜಿಟಿ ದೇವೇಗೌಡ ಹೇಳಿದರು