ಮೈಸೂರು : ಸಿಎಂ ಸಿದ್ದರಾಮಯ್ಯ ಶಾಸಕರಾದ ಕ್ಷೇತ್ರದಲ್ಲಿ ಮಗ ಯತಿಂದ್ರ ಆಡಳಿತ, ಅಧಿಕಾರ ನಡೆಸುತ್ತಿದ್ದು
ಸಿದ್ದರಾಮಯ್ಯ ಪರವಾಗಿ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದಾರೆ.
ವರುಣ ಕ್ಷೇತ್ರದ ತುಂಬಲ ಗ್ರಾಮದಲ್ಲಿ ನೂತನ ಹಾಲಿನ ಡೈರಿ ಮೆಲ್ಚಾವಣಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಯತಿಂದ್ರ ಭಾಗಿಯಾದರು. ಬಳಿಕ ಕೆಂಪಯ್ಯನಹುಂಡಿ ಗ್ರಾಮದಲ್ಲಿ ನೂತನ ಸಂಜೀವಿನಿ ಕಟ್ಟಡ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗಿಯದರು ಯತೀಂದ್ರ ಸಿದ್ದರಾಮಯ್ಯಗೆ ವರುಣ ಕ್ಷೇತ್ರದ ಜನತೆ ಭವ್ಯ ಸ್ವಾಗತ ಕೋರಿದರು. ಬೃಹತ್ ಸೇಬಿನ ಹಾರ ಹಾಕಿ ಕಾಂಗ್ರೆಸ್ ಕಾರ್ಯಕರ್ತರು ಸ್ವಾಗತ ಕೋರಿದರು. ಈ ವೇಳೆ
ಯತೀಂದ್ರ ಸಿದ್ದರಾಮಯ್ಯಗೆ ಅಹವಾಲು ನೀಡಲು ಜನರು ಮುಗಿಬಿದ್ದರು.