ಮೈಸೂರು : ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾನಿಲಯ ವತಿಯಿಂದ ಬ್ಯಾಂಕಿಂಗ್ ಹುದ್ದೆಗಳ ನೇಮಕಾತಿ ಪರೀಕ್ಷಾ ತರಬೇತಿ ಶಿಬಿರದ ಸಮಾರೋಪ ಕಾರ್ಯಕ್ರಮ ಇಂದು ಕಾವೇರಿ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕುಲಪತಿಗಳಾದ ಪ್ರೊ.ಶರಣಪ್ಪ ವಿ ಹಲಸೆವಹಿಸಿದ್ದರು. ಅಧ್ಯಯನ ಪುಸ್ತಕ ಬಿಡುಗಡೆಯನ್ನು ಮೈಸೂರು ಉಪ ಪೊಲೀಸ್ ಆಯುಕ್ತರಾದ ಎಂ.ಮುತ್ತುರಾಜ್ ಅವರು ನೆರವೇರಿಸಿದರು. ಕುಲಸಚಿವರಾದ ಕೆ.ಎಲ್ ಎನ್ ಮೂರ್ತಿ sbi ಪ್ರಾದೇಶಿಕ ವ್ಯವಹಾರ ಮುಖ್ಯ ವ್ಯವಸ್ಥಾಪಕರಾದ ಸತೀಶ್ ಆರ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು