ಮೈಸೂರು : ಸಹಾಯಕ್ಕೆ ಬಂದವನನ್ನೇ ಬಲಿ ಪಡೆದಿರುವ ಘಟನೆ ಮೈಸೂರಿನ ಅಶೋಕಪುರಂನ ರೈಲ್ವೆ ವರ್ಕ್ ಶಾಪ್ ಬಳಿ ನಡೆದಿದೆ.

ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಅಪಘಾತವಾಗಿದ್ದ ಕಾರು ಅಪಘಾತದಿಂದ ಕಾರಿನಲ್ಲಿದ್ದ ಓರ್ವ ಸಾವನ್ನಪ್ಪಿದ್ದು
ಸಹಾಯ ಮಾಡಲು ಬಂದ ಆಟೋಚಾಲಕ ವಿದ್ಯುತ್ ಶಾಕ್ ನಿಂದ ಧಾರುಣ ಸಾವಿಗೀಡಾದ ಘಟನೆ ನಡೆದಿದೆ.
ಸಂಸದ ಶ್ರೀನಿವಾಸ ಪ್ರಸಾದ್ ಸಹೋದರಿ ಮಗ ದೀರಜ್ ಪ್ರಸಾದ್ ಗೆ ಸೇರಿದ ಕಾರು ಎಂದು ತಿಳಿದು ಬಂದಿದೆ.
ಕಾರು ಚಾಲಾಯಿಸುತ್ತಿದ್ದ ಡ್ರೈವರ್ ಕಿರಣ್, ಹಾಗೂ ಸಾಹಯಕ್ಕೆ ಬಂದ ಆಟೋ ಚಾಲಕ ರವಿ ಮೃತ ದುರ್ದೈವಿಗಳು.ಕಾರಿನಲ್ಲಿದ್ದ ಇತರ ಮೂವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.ತಡ ರಾತ್ರಿ 1.30 ರ ಸುಮಾರಿಗೆ ಈ ಘಟನೆ ನಡೆದಿದೆ.
ಮನೆಯಲ್ಲಿ ಕಾರು ಪಾರ್ಕ್ ಮಾಡುವಂತೆ ಚಾಲಕನಿಗೆ ದೀರಜ್ ತಿಳಿಸಿದರು.ಆದ್ರೆ ಸ್ನೇಹಿತನ ಜೊತೆ ಕಾರಿನಲ್ಲಿ ಸುತ್ತಾಟ ನಡೆಸಿದ್ದ ಡ್ರೈವರ್ ಈ ವೇಳೆ ಕಾರು ರಸ್ತೆ ಅಫಘಾತವಾಗಿದೆ.ಸ್ಥಳಕ್ಕೆ ಸಂಚಾರಿ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಘಟನೆ ನಡೆದ ಸಮಯದಲ್ಲಿ ಅಫಘಾತವಾಗಿದೆ ಸ್ಥಳಕ್ಕೆ ಬರುವಂತೆ ಚಾಲಕ ಸ್ನೇಹಿತನಿಗೆ ಕರೆ ಮಾಡಿದ್ದ ಚಾಲಕ ರವಿ.ಕಾರಿನಲ್ಲಿದ್ದವರನ್ನು ರಕ್ಷಿಸುವಾಗ ವಿದ್ಯುತ್ ಪ್ರವಹಿಸಿ ಸಾವನ್ನಪ್ಪಿದ್ದಾನೆ.