ಮೈಸೂರು : ಕಣ್ಣಿಗೆ ಕಾರದಪುಡಿ ಎರಚಿ ಲಕ್ಷಾಂತರ ಹಣ ದರೋಡೆ ಮಾಡಿರುವ ಘಟನೆ ಮೈಸೂರಿನ ಹೆಬ್ಬಾಳ ಕೈಗಾರಿಕಾ ಪ್ರದೇಶದಲ್ಲಿ ನಡೆದಿದೆ.ಅದೃಷ್ಟವಶಾತ್ ಬಾರಿ ಹಣ ದರೋಡೆಯಿಂದ ವ್ಯಕ್ತಿ ತಪ್ಪಿಸಿಕೊಂಡಿದ್ದಾರೆ.
ಎಸ್‌ಬಿಐ ಬ್ಯಾಂಕಿಗೆ ಜಮಾವಣೆ ಮಾಡಲು ಹಣ ತಂದಿದ್ದ ವ್ಯಕ್ತಿ ಬ್ಯಾಂಕ್ ಮುಂದೆ ಆಟೋ ನಿಲ್ಲಿಸಿ ಕೆಳಗಿಳಿದ ತಕ್ಷಣ ಕಣ್ಣಿಗೆ ಕಾರದಪುಡಿ ಎರಚಿ ದರೋಡೆ ಮಾಡಿದ್ದಾರೆ.
ದರಸಗುಪ್ಪೆ ಎಸ್‌ಎಸ್‌ಇ ಕಂಪನಿಯಿಂದ ಬ್ಯಾಂಕ್‌ಗೆ ಜಮೆ ಮಾಡಲು 44,45,000 ಹಣ ತರಲಾಗಿತ್ತು. ಎರಡು ಬ್ಯಾಗ್‌ನಲ್ಲಿ ಹಣ ಇತ್ತು. ಇದರಲ್ಲಿ 6,05,700 ಇದ್ದ ಬ್ಯಾಗ್ ಕಳ್ಳರು ಲಪಟಾಯಿಸಿದ್ದಾರೆ. ಕಳ್ಳರ ಕೈ ಚಳಕ ಸಿಸಿ.ಟಿವಿಯಲ್ಲಿ ಸೆರೆಯಾಗಿದೆ.
ಹಣ ಕಳೆದುಕೊಂಡ ಬಗ್ಗೆ ಕ್ಯಾಶ್ ಕಲೆಕ್ಟರ್ ತುಳಸಿದಾಸ್ ದೂರು ನೀಡಿದ್ದಾರೆ. ಮೇಟಗಳ್ಳಿ ಪೊಲೀಸ್ ಠಾಣೆಯಲ್ಲಿ ಸೆಕ್ಷನ್ 392 ಅಡಿ ರಾಬರಿ ಕೇಸ್ ದಾಖಲಾಗಿದೆ