ಮೈಸೂರು: ಕಿಸಾನ್ ಸಮ್ಮಾನ್ ನಿಧಿಯ 14ನೇ ಕಂತು ಇಂದು ರೈತರ ಖಾತೆಗೆ ವರ್ಗಾವಣೆಯಾಗಲಿದೆ. ಬ್ಯಾಂಕ್ ಮೂಲಕ ರೈತರ ಖಾತೆಗೆ 2000 ಹಣವನ್ನೂ ಪ್ರಧಾನಿ ನರೇಂದ್ರ ಮೋದಿ ಹಾಕಲಿದ್ದಾರೆ.
ದೇಶದ 8.5ಕೋಟಿ ರೈತರ ಖಾತೆಗೆ ಹಣ ಜಮಾವಣೆ ಆಗಲಿದೆ. ಪ್ರತಿ ವರ್ಷ ರೈತ ಕುಟುಂಬಗಳಿಗೆ 6000ಹಣ ನೀಡುವ ಕೇಂದ್ರ ಸರ್ಕಾರದ ಮಹತ್ವಕಾಂಕ್ಷೆ ಯೋಜನೆ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಾಗಿದೆ.
ರಾಜಸ್ಥಾನದ ಸೀಕರ್ ನಲ್ಲಿ 11ಗಂಟೆಗೆ ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಣ ವರ್ಗಾವಣೆ ಮಾಡಲಿದ್ದಾರೆ ಎಂದು ಕೇಂದ್ರ ಕೃಷಿ ಸಚಿವಾಲಯ ಮಾಹಿತಿ ನೀಡಿದೆ.