ಕೊಡಗು: ಕೊಡಗು ಜಿಲ್ಲೆಯಲ್ಲಿ ಮಳೆಯ ಆರ್ಭಟದಿಂದ ತಗ್ಗು ಪ್ರದೇಶಗಳಿಗೆ ನೀರು ನುಗ್ಗ ತೊಡಗಿದೆ. ಕುಶಾಲನಗರದ ಸಾಯಿ ಬಡಾವಣೆಯ ಮನೆಗೆ ನೀರು ನುಗ್ಗಿ ರಾತ್ರೋ ರಾತ್ರಿ ನಿವಾಸಿಗಳು ಮನೆಯನ್ನೂ ಖಾಲಿ ಮಾಡಿದ್ದಾರೆ.
ಹಾರಾಂಗಿ ಜಲಾಶಯದಿಂದ 30,000 ಕ್ಯೂಸೆಕ್ಸ್ ನೀರು ನದಿಗೆ ಬಿಟ್ಟ ಹಿನ್ನಲೆಕುಶಾಲನಗರದ ಸಾಯಿ ಬಡಾವಣೆಗೆ ನುಗ್ಗಿದ ನೀರು ನುಗ್ಗಿದೆ.ಮನೆಗೆ ನೀರು ನುಗ್ಗುತ್ತಿದಂತೆ ಸ್ಥಳಕ್ಕೆ ಅಧಿಕಾರಿಗಳ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ತಗ್ಗು ಪ್ರದೇಶಗಳಿಗೆ ನೀರು ನುಗ್ಗುವ ಆತಂಕ ಇದೆ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಮೊದಲೆ ಜಿಲ್ಲಾಡಳಿತ ಸೂಚನೆ ನೀಡಿದ್ದರು ಸ್ಥಳೀಯರು ನಿರ್ಲ್ಯಕ್ಷ ತೋರಿದ್ದಾರೆ ಈಗ ಮನೆಗೆ ನೀರು ನುಗ್ಗುತ್ತಿದ್ದು ಮನೆಯನ್ನೂ ಖಾಲಿ ಮಾಡುತ್ತಿದ್ದಾರೆ