ಮೈಸೂರು : ಕಾಂಗ್ರೆಸ್ ಮಾಜಿ ಶಾಸಕ ವಾಸು ಪಕ್ಷ ವಿರೋಧಿ ಚಟುವಟಿಕೆ ಕುರಿತು ಶಿಸ್ತು ಸಮಿತಿಯಿಂದ ನೋಟೀಸ್ ಜಾರಿ ವಿಚಾರಕ್ಕೆ ಮಾಜಿ ಶಾಸಕ ವಾಸು ಪ್ರತಿಕ್ರಿಯೆ ನೀಡಿದ್ದಾರೆ.
ಯಾರು ಬೇಕಾದ್ರು ಹೈ ಕಮಾಂಡ್ ಗೆ ದೂರು ನೀಡಬಹುದು.ಯಾರೋ ಇಬ್ಬರು ನನ್ನ ಬಗ್ಗೆ ದೂರು ನೀಡಿದ್ದಾರೆ ಅಷ್ಟೇ.ಅವರಿಬ್ಬರ ಹಿನ್ನೆಲೆ ಏನು ಎಂಬುದು ಎಲ್ಲರಿಗೂ ಗೊತ್ತು.ಈ ರೀತಿಯ ದೂರು ಕೇಳಿಬಂದಿದೆ ಸ್ಪಷ್ಟನೆ ನೀಡುವಂತೆ ನನಗೆ ತಿಳಿಸಿದ್ದಾರೆ.
ಸದ್ಯ ಇನ್ನೂ ಉತ್ತರ ನೀಡಿಲ್ಲ, ಮುಂದಿನ ದಿನ ಸೂಕ್ತ ಉತ್ತರ ನೀಡುತ್ತೇನೆ ಎಂದರು.
ಸದ್ಯ ದೂರಿನ ಕಾಪಿ ನಾನು ನೋಡಿಲ್ಲ, ಮುಂದೆ ದೂರಿನನ್ವಯ ಉತ್ತರ ನೀಡುತ್ತೇನೆ.ನನ್ನ ಮೇಲೆ ಇಂತಹ ಟಾರ್ಗೆಟ್ ವರ್ಷದ ಹಿಂದೆಯೇ ನಡೆದಿದೆ.
ಇದೆಲ್ಲ ನನಗೆ ಕಿರುಕುಳ ಎನಿಸುತ್ತಿಲ್ಲ, ನನ್ನ ಅನುಭವದಲ್ಲಿ ಇದುವೇ ಒಂದು ಭಾಗ ಎಂದುಕೊಳ್ಳುತ್ತೇನೆ.
ನನ್ನ ಬಗ್ಗ್ಗೆ ಸದ್ಯ ವರಿಷ್ಠರು ಏನು ತೀರ್ಮಾನ ತೆಗೆದುಕೊಳ್ಳುತ್ತಾರೋ ಅದನ್ನು ಸ್ವಾಗತಿಸುತ್ತೇನೆ.
ಮನೆಗೆ ಸೊಸೆ ಬಂದ ಮೇಲೆ ಅತ್ತೆಗೆ ಪ್ರಮುಖ್ಯತೆ ಕಡಿಮೆ ಆಗುತ್ತೆ ಅಷ್ಟೇ.ಮುಂದಿನ ಲೋಕಸಭಾ ಚುನಾವಣೆಗೆ ಪಕ್ಷ ಸ್ಪರ್ಧೆ ಮಾಡು ಅಂದ್ರೆ ಮಾಡ್ತಾನೆ, ಇಲ್ಲಾ ಅಂದ್ರೆ ಸುಮ್ಮನಾಗ್ತೇನೆ ಎಂದ ಮಾಜಿ ಶಾಸಕ ವಾಸು ಹೇಳಿದರು