ಮೈಸೂರು : ಟಿ.ನರಸೀಪುರದಲ್ಲಿ ಗುತ್ತಿಗೆ ನೌಕರನ ಕೆಲಸದಿಂದ ತೆಗೆಯುವಲ್ಲಿ ಸುನೀಲ್ ಬೋಸ್ ಪಾತ್ರ ಆರೋಪ ವಿಚಾರಕ್ಕೆ ಉತ್ತರಿಸಿರುವ ಸುನೀಲ್ ಬೋಸ್
ತಮ್ಮ ಮೇಲಿನ ಆರೋಪವನ್ನ ಅಲ್ಲೆಗಳಿದಿದ್ದಾರೆ .
ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಯಾರನ್ನು ಕೆಲಸದಿಂದ ತೆಗೆಯುವಂತೆ ಹೇಳಿಲ್ಲ.
ಅಧಿಕಾರಿ ಯಾಕಾಗಿ ನನ್ನ ಹೆಸರು ಬಳಸಿದ್ದಾರೆ ಗೊತ್ತಿಲ್ಲ.
ಈ ಬಗ್ಗೆ ಅಧಿಕಾರಿಗೆ ಸ್ಪಷ್ಟನೆ ಕೇಳುತ್ತೇನೆ.ಗುತ್ತಿಗೆ ನೌಕರರನ್ನ ಕೆಲಸ ತೆಗೆದುಕೊಳ್ಳಲು ಅವಧಿಯ ಮಾನದಂಡ ಇರುತ್ತೆ.
ನಂತರ ಅವರನ್ನ ಉಳಿಸಿಕೊಳ್ಳಲು ಬಹುದು, ತೆಗೆಯಲು ಬಹುದು.ಈ ಪ್ರಕರಣದಲ್ಲಿ ಆ ವ್ಯಕ್ತಿಯನ್ನ ಉಳಿಸಿಕೊಳ್ಳೊದು ಅಧಿಕಾರಿಗೆ ಬಿಟ್ಟಿದ್ದು.ನಾನು ಹಸ್ತಕ್ಷೇಪ ಮಾಡುವುದಿಲ್ಲ ಎಂದರು.
ಅಧಿಕಾರ ದುರುಪಯೋಗ ಪಡಿಸಿಕೊಳ್ಳುತ್ತಿದ್ದಿರಾ ಎಂಬ ಪ್ರಶ್ನೆಗೆ ಚುನಾವಣೆಯಲ್ಲಿ ಪ್ರತಿಮನೆಯನ್ನ ಸುತ್ತಾಡಿ ತಂದೆಯನ್ನ ಗೆಲ್ಲಿಸಿದ್ದೇನೆ.ಜನರ ಕೆಲಸ ಮಾಡಿಕೊಡುವುದು ನನ್ನ ಜವಾಬ್ದಾರಿ.ಅಷ್ಟನ್ನ ನಾನು ಮಾಡುತ್ತಿದ್ದೇನೆ.
ತಂದೆಯ ಅಧಿಕಾರಿವನ್ನ ದುರುಪಯೋಗ ಮಾಡಿಲ್ಲ ಎಂದು ಸುನೀಲ್ ಬೋಸ್ ಜಾಣ್ಮೆಯ ಉತ್ತರ ಕೊಟ್ಟಿದ್ದಾರೆ.
ಅಲ್ಲದೆ ಚಾಮರಾಜನಗರ ಲೋಕಸಭಾ ಕ್ಷೇತ್ರಕ್ಕೆ ನಾನು ಪ್ರಬಲ ಟಿಕೆಟ್ ಆಕಾಂಶಿ. 2008 ರಿಂದ ನಾನು ಸಕ್ರಿಯ ರಾಜಕಾರಣದಲ್ಲಿ ಇದ್ದೇನೆ.ಹಾಗಿಂದ ನಾನು ಪಕ್ಷಕ್ಕಾಗಿ ದುಡಿದಿದ್ದೇನೆಇದರ ಆಧಾರದ ಮೇಲೆ ಲೋಕಸಭಾ ಟಿಕೆಟ್ ಕೇಳುತ್ತಿದ್ದೇನೆ.ಟಿಕೆಟ್ ಕೊಟ್ರೆ ಸಂತೋಷದಿಂದ ಸ್ಪರ್ಧೆ ಮಾಡುತ್ತೇನೆ.ಒಂದು ವೇಳೆ ಟಕೆಟ್ ಸಿಗದಿದ್ದರೆ ಪಕ್ಷದ ಪರವಾಗಿ ಕೆಲಸ ಮಾಡುತ್ತೇನೆ ಎಂದು ತಿಳಿಸಿದರು.