ಕಾಲಿವುಡ್ ಹೀರೋ ಧನುಷ್ ಅವರು ಈಗ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಸದ್ದು ಮಾಡ್ತಿದ್ದಾರೆ. ಸಿನಿಮಾ-ವೈಯಕ್ತಿಕ ಎರಡು ವಿಚಾರವಾಗಿಯೂ ಸುದ್ದಿಯಲ್ಲಿದ್ದಾರೆ. ಇದರ ನಡುವೆ ಮುಂದಿನ ಸಿನಿಮಾ ಬಗ್ಗೆ ಲುಕ್ ರಿವೀಲ್ ಮಾಡಲಾಗಿದೆ. ʼD 50′ ಸಿನಿಮಾ ಲುಕ್ ರಿವೀಲ್ ಆಗಿದೆ. ಜೊತೆಗೆ ರೊಮ್ಯಾಂಟಿಕ್ ಸಿನಿಮಾಗಳಲ್ಲಿ ನಟಿಸುವ ಬಗ್ಗೆ ಧನುಷ್ ಪ್ರತಿಕ್ರಿಯೆ ನೀಡಿದ್ದಾರೆ.
ಧನುಷ್ ಅವರು ಹಿಂದಿ, ತಮಿಳು, ಹಾಲಿವುಡ್ ಸಿನಿಮಾರಂಗದಲ್ಲಿ ಮಿಂಚ್ತಿದ್ದಾರೆ. ಪಾತ್ರ ಯಾವುದೇ ಇರಲಿ, ಆ ಪಾತ್ರವೇ ತಾವಾಗಿ ನಟಿಸುತ್ತಾರೆ. ಅವರ ಸಹಜ ಅಭಿನಯಕ್ಕೆ ಸೋಲದೇ ಇರೋರು ಯಾರು ಇಲ್ಲ. ವೃತ್ತಿರಂಗದಲ್ಲಿ ಮಿಂಚಿದ್ರು. ವೈಯಕ್ತಿಕ ಬದುಕಿನಲ್ಲಿ ಅವರು ಮುಗ್ಗರಿಸಿದ್ದರು. ರಜನಿಕಾಂತ್ ಮಗಳು ಐಶ್ವರ್ಯ ಜೊತೆ ಡಿವೋರ್ಸ್ ಪಡೆದುಕೊಂಡು ಒಂಟಿಯಾಗಿ ಧನುಷ್ ಜೀವನ ಸಾಗಿಸುತ್ತಿದ್ದಾರೆ. ಸಿನಿಮಾಗಾಗಿಯೇ ತಮ್ಮ ಸಮಯವನ್ನ ಮೀಸಲಿಡುತ್ತಿದ್ದಾರೆ
ಧನುಷ್- ಎ.ಆರ್ ರೆಹಮಾನ್ ಅವರು ಇತ್ತೀಚಿಗೆ ಇನ್ಸ್ಟಾಗ್ರಾಂ ಲೈವ್ ಬಂದಿದ್ದರು. 2013ರಲ್ಲಿ ರಿಲೀಸ್ ಆದ ‘ಮರಿಯಾನ್’ ಚಿತ್ರಕ್ಕೆ 10 ವರ್ಷಗಳ ಸಂಭ್ರಮವಾಗಿದ್ದು, ಈ ಖುಷಿಯನ್ನು ಲೈವ್ ಮೂಲಕ ಧನುಷ್- ರೆಹಮಾನ್ ಆಚರಿಸಿಕೊಂಡಿದ್ದರು. ಧನುಷ್ ಅವರು ಮುಖ್ಯಭೂಮಿಕೆ ನಿರ್ವಹಿಸಿದ್ದ ಈ ಚಿತ್ರಕ್ಕೆ ರೆಹಮಾನ್ ಅವರು ಸಂಗೀತ ಸಂಯೋಜನೆ ಮಾಡಿದ್ದರು. ಇಬ್ಬರೂ ಲೈವ್ ಬಂದು ಮರಿಯಾನ್ ಸಿನಿಮಾದ ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಈ ವೇಳೆ ಧನುಷ್ ಅವರ ಲುಕ್ ಎಲ್ಲರ ಗಮನ ಸೆಳೆದಿದೆ.
ಇಷ್ಟೇ ಅಲ್ಲ, ‘ಮರಿಯಾನ್’ ಸೇರಿದಂತೆ ಸಾಕಷ್ಟು ರೊಮ್ಯಾಂಟಿಕ್ ಸಿನಿಮಾದಲ್ಲಿ ನಟಿಸಿರೋ ಧನುಷ್‌ಗೆ ರೊಮ್ಯಾಂಟಿಕ್ ಸಿನಿಮಾದಲ್ಲಿ ನಟಿಸುವಂತೆ ಕೇಳಲಾಗಿದೆ. ಅದಕ್ಕೆ ಅವರು ನಗುತ್ತಲೇ ಉತ್ತರಿಸಿದ್ದಾರೆ. ನನಗೆ ಈಗ 40 ವರ್ಷವಾಗಿದೆ. ಮುಂದೆ ರೊಮ್ಯಾಂಟಿಕ್ ಕಥೆಗಳಲ್ಲಿ ನಟಿಸುವುದಿಲ್ಲ. ಮುಂದಿನ ಪೀಳಿಗೆಯ ನಟರು ಇಂತಹ ಸಿನಿಮಾಗಳನ್ನ ಮಾಡಲಿ ಎಂದು ಜಾಣ್ಮೆಯ ಉತ್ತರ ನೀಡಿದ್ದಾರೆ. ಈ ಮೂಲಕ ರೊಮ್ಯಾಂಟಿಕ್ ಚಿತ್ರಗಳಿಗೆ ನಟ ಗುಡ್ ಬೈ ಹೇಳಿದ್ದಾರೆ.