ಮೈಸೂರು: ಬಿಜೆಪಿಯ 10 ಶಾಸಕರನ್ನ ಅಮಾನತು ಮಾಡಿರುವ ವಿಚಾರಕ್ಕೆ ರಾಜ್ಯ ಸರ್ಕಾರದ ವಿರುದ್ಧ ಸರಣಿ ಟ್ವಿಟ್ ಮಾಡುವ ಮೂಲಕ ಬಿಜೆಪಿ ತನ್ನ ಆಕ್ರೋಶವನ್ನು ಹೊರ ಹಾಕಿದೆ.

ಕಾಂಗ್ರೆಸ್ ನ ತುಘಲಕ್ ಸರ್ಕಾರಕ್ಕೆ ದಿಕ್ಕಾರ
ಕರ್ನಾಟಕದಲ್ಲಿ ಪ್ರಜಾಪ್ರಭುತ್ವದ ಕಗ್ಗೊಲೆ ಎಂದಿರುವ ಬಿಜೆಪಿ ರಾಜ್ಯದ ಹಿರಿಯ ಐಎಎಸ್ ಅಧಿಕಾರಿಗಳನ್ನ ತಮ್ಮ ಮನೆಯಾಳುಗಳನ್ನಾಗಿ ಕಾಂಗ್ರೆಸ್ ನಡೆಸಿಕೊಂಡಿದೆ
ಇದನ್ನ ಪ್ರಶ್ನೆ ಮಾಡಿದ್ದಕ್ಕೆ ತನ್ನ ದಮನಕಾರಿ ಹಾಗೂ ಸೇಡಿನ ರಾಜಕೀಯವನ್ನ ಸ್ಪೀಕರ್ ಮೂಲಕ ಮಾಡಿಸುತ್ತಿದೆ
ಕಾಂಗ್ರೆಸ್ ನ ಈ ಸಂವಿಧಾನ ವಿರೋಧಿ ನಿಲುವನ್ನು ನಾವು ತೀವ್ರವಾಗಿ ಖಂಡಿಸುತ್ತೇನೆ ಎಂದಿದೆ.
ರಾಜ್ಯದಲ್ಲಿ ಸರ್ವಾಧಿಕಾರಿ ಸಿದ್ದರಾಮಯ್ಯನವರ ಸರ್ಕಾರದ ತುಘಲಕ್ ದರ್ಬಾರ್ ಮೀತಿ ಮೀರಿದೆ
ಇವರು ಮಾಡುವ ಅನಾಚಾರಗಳನ್ನು ಪ್ರಶ್ನಿಸಿದ ಮಾತ್ರಕ್ಕೆ ನಮ್ಮ ಶಾಸಕರನ್ನ ಅಮಾನತುಗೊಳಿಸಿದೆ.
ರಾಜ್ಯದಲ್ಲಿ ಸಿದ್ದರಾಮಯ್ಯ ಸರ್ಕಾರ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿದೆ.ನೀವು ನಮ್ಮ ಶಾಸಕರನ್ನ ಅಮಾನತು ಮಾಡಬಹುದು,ಹತ್ತಿಕ್ಕಲು ಸಾಧ್ಯವಿಲ್ಲ.ನಿಮ್ಮ ಈ ರಣಹೇಡಿ ದಬ್ಬಾಳಿಕೆಗೆ ನಾವು ಕುಗ್ಗುವುದಿಲ್ಲ.ನಿಮ್ಮ ಜನ ವಿರೋಧಿ,ನಾಡ ವಿರೋಧಿ ನಿಲುವುಗಳ ವಿರುದ್ಧ ನಮ್ಮ ಹೋರಾಟ ಶತ ಸಿದ್ದ ಎಂದು ಸರಣಿ ಟ್ವಿಟ್ ಮಾಡುವ ಮೂಲಕ ಕಾಂಗ್ರೆಸ್ ವಿರುದ್ಧ ಬಿಜೆಪಿ ಕಿಡಿಕಾರಿದೆ.