ಬೆಂಗಳೂರು:- ವಿಧಾನಸಭೆಯಲ್ಲಿ ಬುಧವಾರ 10 ಬಿಜೆಪಿ ಶಾಸಕರ ಅಮಾನತಾದ ಬಳಿಕ, ಆವರಣದಲ್ಲಿ ನೂಕಾಟ ತಳ್ಳಾಟ ಏರ್ಪಟ್ಟು ಈ ವೇಳೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅಸ್ವಸ್ಥರಾಗಿ ಕುಸಿದು ಬಿದ್ದಿದ್ದಾರೆ.
ಸದನದಲ್ಲಿ ಸ್ಪೀಕರ್ ಸ್ಥಾನಕ್ಕೆ ಅಗೌರವ ತೋರಿದ ಹಿನ್ನೆಲೆ ಸ್ಪೀಕರ್ ಯುಟಿ ಖಾದರ್, 10 ಬಿಜೆಪಿ ಶಾಸಕರನ್ನು ಅಮಾನತು ಮಾಡಿದರು. ಸಸ್ಪೆಂಡ್ ಆದ ಬಳಿಕವೂ ಬಿಜೆಪಿ ಸದಸ್ಯರು ಸದನದೊಳಗೆ ಪ್ರತಿಭಟನೆ ನಡೆಸಿದ್ದರು.
ಈ ವೇಳೆ ಮಾರ್ಷಲ್‍ಗಳು ಅಮಾನತಾದ ಶಾಸಕರನ್ನು ಸದನದಿಂದ ಹೊರಹಾಕುವ ಕೆಲಸ ಮಾಡಿದರು.
ಈ ವೇಳೆ ಸ್ಥಳದಲ್ಲಿ ನೂಕಾಟ ತಳ್ಳಾಟ ಜೋರಾಗಿ, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿಧಾನಸಭೆಯ ಆವರಣದಲ್ಲಿ ಕುಸಿದು ಬಿದ್ದಿದ್ದಾರೆ. ಯತ್ನಾಳ್ ಅವರಿಗೆ ಬಿಪಿ ಏರಿಕೆ ಹಾಗೂ ಶುಗರ್‍ನಲ್ಲಿ ಏರುಪೇರಾಗಿದೆ ಎನ್ನಲಾಗಿದೆ. ಇದೀಗ ಯತ್ನಾಳ್ ಅವರನ್ನು ಚಿಕಿತ್ಸೆಗೆ ಅಂಬುಲೆನ್ಸ ನಲ್ಲಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ