ಮೈಸೂರು : ವಸ್ತು ಪ್ರದರ್ಶನದ ಅಭಿವೃದ್ಧಿಗೆ ಕೇಂದ್ರ ಸರ್ಕಾರದ ಸ್ವದೇಶಿ ದರ್ಶನ್ ಯೋಜನೆ ಅಡಿ 80 ಕೋಟಿ ಅನುದಾನ ಬಿಡುಗಡೆಯಾಗಿದೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು.
ಈ ವಿಚಾರ ಕುರಿತು ಇಂದು ಸಂಬಂಧಪಟ್ಟ ಅಧಿಕಾರಿಗಳ ಜೊತೆ ಸಭೆ ನಡೆಸಿ ಮಾತನಾಡಿದ ಪ್ರತಾಪ್ ಸಿಂಹ, ಕೆಲವೇ ದಿನಗಳಲ್ಲಿ ಡಿಪಿಆರ್ ಸಿದ್ದಪಡಿಸಿದ ಬಳಿಕ ಕಾಮಗಾರಿ ಆರಂಭಿಸಲಾಗುತ್ತದೆ.ಮುಂದಿನ ದಿನಗಳಲ್ಲಿ ಮೈಸೂರು ವಸ್ತು ಪ್ರದರ್ಶನ ವರ್ಷ ಪೂರ್ತಿ ತೆರೆಯುವಂತೆ ಮತ್ತು ವಿವಿಧ ದೇಶೀಯ ಬ್ರಾಂಡ್ ಉತ್ಪನ್ನಗಳ ಮಾರಾಟ ಮಳಿಗೆಗಳನ್ನ ಇಲ್ಲೇ ಆರಂಭಿಸಿ ಎಲ್ಲಾ ಮಾದರಿಯ ಬ್ರಾಂಡ್ ಗಳು ಒಂದೇ ಭಾಗದಲ್ಲಿ ಸಿಗುವ ಹಾಗೆ ವಸ್ತು ಪ್ರದರ್ಶನವನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಅಭಿವೃದ್ಧಿ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗುತ್ತದೆ ಎಂದರು.
ರಾಜಕೀಯ ವಿಚಾರಕ್ಕೆ ಪ್ರತಾಪ್ ಸಿಂಹ ನೋ ಕಮೆಂಟ್ಸ್
ವಿಪಕ್ಷಗಳ ಮಹಾಘಟ ಬಂಧನ ಕುರಿತು ಸಂಸದ ಪ್ರತಾಪ್ ಸಿಂಹ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.
ಕಳೆದ 5 ತಿಂಗಳು ರಾಜಕಾರಣದಲ್ಲಿ ಕ್ರಿಮಿನಲ್ಲಾಗಿ ವೇಸ್ಟ್ ಮಾಡಿದ್ದೇವೆ.ಉಳಿದ ಸಮಯದಲ್ಲಿ ಅಭಿವೃದ್ಧಿಯತ್ತ ಚಿಂತನೆ ಮಾಡೋಣ.ಜನರಿಗೆ ಉಪಯೋಗವಾಗುವಂತ ಕೆಲಸಗಳಿಗೆ ಮಾನ್ಯತೆ ಕೊಡೋಣ ಎಂದು
ರಾಜಕೀಯ ವಿಷಯಗಳಿಗೆ ಸಂಸದ ಪ್ರತಾಪ್ ಉತ್ತರ ನೀಡದೆ ಅಭಿವೃದ್ದಿ ಒಂದೇ ಮಂತ್ರ ಎಂದು ಹೇಳಿದರು.