ಬೆಂಗಳೂರು : ಅಧಿಕಾರ ಬಂಧನಕ್ಕಾಗಿ ಘಟ ಬಂಧನಕ್ಕೆ ಒಳಗಾದ ಕಾಂಗ್ರೆಸ್ ಎಂದು ಸರಣಿ ಟ್ವೀಟ್ ಮೂಲಕ ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಕಿಡಿಕಾರಿದ್ದಾರೆ.

ಕರ್ನಾಟಕದ ಹೆಮ್ಮೆ ,ಸ್ವಾಭಿಮಾನ ಪರಂಪರೆಗೆ ಕಾಂಗ್ರೆಸ್ ಘಟ ಶ್ರಾದ್ಧ ಮಾಡಿದೆ. ಘಟ ಬಂಧನಕ್ಕೆ ಬಂಧ ಹೊರ ರಾಜ್ಯದ ರಾಜಕಾರಣಿಗಳ ಸೇವೆಗೆ ರಾಜ್ಯದ ಐ ಎ ಎಸ್ ಅಧಿಕಾರಿಗಳನ್ನು ಸರ್ಕಾರ ಕಳಿಸಿದೆ ನುಡಿದಂತೆ ನಡೆಯುವುದು ಎಂದರೇ ಇದೇನಾ ಎಂದು ಕಾಂಗ್ರೆಸ್ ವಿರುದ್ಧ ವ್ಯಂಗ್ಯವಾಡಿದ್ದಾರೆ
ಕಾಂಗ್ರೆಸ್ ಪಕ್ಷ ಐಎಎಸ್ ಜೀತ ಪದ್ಧತಿಯನ್ನು ಜಾರಿ ತಂದಿದೆ.ರಾಜಕೀಯ ಆಡಳಿತ ವಸಾಹತುಶಾಹಿ ಯನ್ನು ದೇಶಕ್ಕೆ ಮಾಡಿ ಪರಿಚಯ ಮಾಡಿದೆ.ಕಾಂಗ್ರೆಸ್ ಯಾವಾಗಲೂ ಕುಖ್ಯಾತಿಗಳಿಗೆ ಕುಖ್ಯಾತಿ
ಅಪಾಯಕಾರಿ ಹಸ್ತವಾಸಿಯೇ ಕೈ ಪಕ್ಷದ ಆಸ್ತಿ ಎಂದು ಟ್ವೀಟ್ ಮೂಲಕ ಕಾಂಗ್ರೆಸ್ ಪಕ್ಷವನ್ನು ಜರಿದಿದ್ದಾರೆ
ಅಲ್ಲದೆ ಕನ್ನಡಿಗರು 135 ಸೀಟು ಕೊಟ್ಟ ತಪ್ಪಿಗೆ ವಿಪರೀತ ದರ್ಪ ತೋರಿದೆ. ಸತ್ಯಾಯುಗದಲ್ಲಿ ಹಿರಣ್ಯಕಸಿಪು ಅಷ್ಟ ದಿಕ್ಪಾಲಕರನ್ನು ಸೆರೆ ಹಿಡಿದು ಮೆಟ್ಟಿಲು ಮಾಡಿಕೊಂಡು ಪಾಪಕ್ಕೆ ಸರ್ವನಾಶವಾದ.ಅದೇ ರೀತಿ 30 ಜನ ಅಧಿಕಾರಿಗಳನ್ನು ಕಾಂಗ್ರೆಸ್ ದ್ವಾರ ಪಾಲಕರನ್ನಾಗಿ ಮಾಡುವ ಮೂಲಕ ತನ್ನ ನಾಶಕ್ಕೆ ತಾನೇ ನಾಂದಿ ಹಾಡಿದೆ ಎಂದು ಟ್ವೀಟ್ ಮೂಲಕ ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಕೆಂಡಕಾರಿದ್ದಾರೆ