ಮೈಸೂರು : ರಾಜಕೀಯ ವಿದ್ಯಮಾನಗಳ ಬಗ್ಗೆ ಪ್ರತಿಕ್ರಿಯೆ ನೀಡಲು ಸಂಸದ ಪ್ರತಾಪ್ ಸಿಂಹ ನಿರಾಕರಿಸಿದ್ದಾರೆ
ಮಹಾಘಟ ಬಂಧನ, ಜೆಡಿಎಸ್ ಬಿಜೆಪಿ ಮೈತ್ರಿ ಬಗ್ಗೆ ನೊ ಕಮೆಂಟ್ಸ್ ಎಂದಿದ್ದಾರೆ.
ನನ್ನನ್ನೇನು ಕೇಳಬೇಡಿ, ನನಗೆ ಏನು ಗೊತ್ತಿಲ್ಲ ಎಂದು ನನ್ನದು ಅಭಿವೃದ್ಧಿ ರಾಜಕಾರಣ, ಅಭಿವೃದ್ಧಿ ಬಗ್ಗೆಯಷ್ಟೇ ತಲೆಕೆಡಿಸಿಕೊಂಡಿದ್ದೇನೆ.ನನ್ನ ವಿರುದ್ಧ ಯಾರು ಸ್ಪರ್ಧೆ ಮಾಡುತ್ತಾರೋ ಅದೂ ಗೊತ್ತಿಲ್ಲ.ರಾಜಕೀಯ ವಿಚಾರವಾಗಿ ನಾನು ಮಾತನಾಡಲ್ಲ, ಮಾತನಾಡಬೇಡಿ ಎಂದು ಯರು ನನಗೆ ಸೂಚನೆ ನೀಡಿಲ್ಲ ಎಂದರು.
ನಾನು ಕೆಲಸ ಮಾಡಿದ್ದೇನೆ, ಏನು ಕೆಲಸ ಮಾಡಿದ್ದೇನೆ ಎಂದು ನೋಡಿಕೊಳ್ಳಲು ಮೇಲೆ ಚಾಮುಂಡಿ ತಾಯಿ ಇದ್ದಾಳೆ ಎನ್ನುವ ಮೂಲಕ ರಾಜಕೀಯ ಕುರಿತು ಮಾಧ್ಯಮಗಳಲ್ಲಿ ಪ್ರತಿಕ್ರಿಯೆ ನೀಡದೆ ಜಾರಿಕೊಂಡಿದ್ದಾರೆ