ಬೆಂಗಳೂರು : ಸಿಎಂ ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷಕ್ಕೆ ಹೋಗಿ ಮೆರೆಯುತ್ತಿದ್ದಾರೆ ಅವರಿಗೆ ತಾಕತ್ ಇದ್ರೆ ಹೊಸ ಪಕ್ಷ ಕಟ್ಟಿ 5 ಸ್ಥಾನ ಗೆದ್ದು ತೋರಿಸಲಿ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಸವಾಲು ಹಾಕಿದ್ದಾರೆ
ಸಿದ್ದರಾಮಯ್ಯ ಜೆಡಿಎಸ್ ವಿಸರ್ಜನೆ ಬಗ್ಗೆ ವ್ಯಂಗ್ಯವಾಡಿದ್ದಾರೆ ನಾನು ಎಲ್ಲಿಯೂ ಅಧಿಕಾರಕ್ಕೆ ಬರದಿದ್ರೆ ಪಕ್ಷ ವಿಸರ್ಜನೆ ಮಾಡುತ್ತೇನೆ ಎಂದು ಹೇಳಿಲ್ಲ ಜನರು 123 ಸ್ಥಾನ ಕೊಟ್ಟು ಪಂಚ ರತ್ನ ಯೋಜನೆ ಜಾರಿ ಮಾಡಲಿಲ್ಲ ಅಂದ್ರೆ ಪಕ್ಷ ವಿಸರ್ಜನೆ ಮಾಡುತ್ತೇನೆ ಎಂದು ಹೇಳಿದ್ದೆ ಎಂದು ಸ್ಪಷ್ಟನೆ ನೀಡಿದರು.
ಬಿಜೆಪಿ ಜೊತೆ ಜೆಡಿಎಸ್ ಮೈತ್ರಿ ವಿಚಾರಕ್ಕೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಬಿಜೆಪಿ ಅವ್ರು ನನ್ನ ಸಭೆ ಕರೆದ್ರೆ ಹೋಗ್ತೀನಿ ಸಭೆಯಲ್ಲಿ ನನ್ನ ವಿಚಾರವನ್ನು ನಾನು ಮಂಡಿಸುತ್ತೆನೆ ಸದ್ಯಕ್ಕೆ ವಿರೋಧ ಪಕ್ಷದ ಸ್ಥಾನ ಕೇಂದ್ರ ಮಂತ್ರಿ ಸ್ಥಾನ ಎಲ್ಲವೂ ಅಪ್ರಸ್ತುತ ಎಂದು ಹೇಳಿದರು