ಮೈಸೂರು : ತವರು ಮನೆ ಸೇರಿದ್ದ ಪತ್ನಿಯನ್ನ ಭೀಕರವಾಗಿ ಕೊಂದ ಪತಿರಾಯಪ್ಪ ಅಡ್ಡ ಬಂದ ಅತ್ತೆಯನ್ನು ಕೊಲೆ ಮಾಡಲು ಯತ್ನ ಮಾಡಿದ ಘಟನೆ ಮೈಸೂರಿನ ಕುಂಬಾರಕೊಪ್ಪಲಿನಲ್ಲಿ ನಡೆದಿದೆ. ಹರ್ಷಿತ (21)ವರ್ಷ ಮೃತ ದುರ್ದೈವಿ.
ಮಾದೇಶ್ (30)ವರ್ಷ ಕೊಲೆ ಆರೋಪಿ.
ಗುಂಡ್ಲುಪೇಟೆ ತಾಲ್ಲೂಕಿನ ಬೇರಂಬಳ್ಳಿ ಗ್ರಾಮದ ನಿವಾಸಿ.
ಒಂದು ವರ್ಷದ ಹಿಂದೆ ಇಬ್ಬರು ಮದುವೆಯಾಗಿದ್ದರು.
ಪ್ರಾರಂಭದ ದಿನಗಳಲ್ಲಿ ಅನ್ಯೂನತೆಯಿಂದ ಇದ್ದ ದಂಪತಿಗಳ ನಡುವೆ ಕ್ಷುಲ್ಲಕ ಕಾರಣಕ್ಕೆ ವಿರಸ ಉಂಟಾಗಿದೆ.
ಆಗಾಗ ಕಿರಿಕ್ ಮಾಡುತ್ತಿದ್ದ ಮಾದೇಶ್.
ಹರ್ಷಿತಳನ್ನ ಕೊಲೆ ಮಾಡುವುದಾಗಿ ಬೆದರಿಸುತ್ತಿದ್ದ.
ಆಕೆಯ ಜೊತೆ ಮಲಗುವಾಗ ಮಚ್ಚು ಇಟ್ಟುಕೊಂಡು ಮಲಗುತ್ತಿದ್ದ.ಇದಕ್ಕೆ ಹೆದರಿದ್ದ ಹರ್ಷಿತ ತವರು ಮನೆ ಸೇರಿದ್ದಳು.
ಈ ವೇಳೆ ಹರ್ಷಿತಳನ್ನ ಕರೆದುಕೊಂಡು ಹೋಗಲು ಬಂದಿದ್ದ ಮಾದೇಶ್ ಹರ್ಷಿತಳ ಮೇಲೆ ಮನಸೋ ಇಚ್ಛೆ ಬಂದಂತೆ ಚಾಕುವಿನಲ್ಲಿ ಚುಚ್ಚಿ ಕೊಲೆ ಮಾಡಿದ್ದಾನೆ.
ಸ್ಥಳಕ್ಕಾಗಿಮಿಸಿದ ಮೇಟಗಳ್ಳಿ ಪೋಲೀಸರು ಕೊಲೆ ಮಾಡಿದ ಆರೋಪಿಯನ್ನ ವಶಕ್ಕೆ ಪಡೆದಿದ್ದಾರೆ.
ಈ ಸಂಬಂಧ ಮೇಟಗಳ್ಳಿ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.