ಮೈಸೂರು : ದಿಲೀಪ್ ಚೌಡಳ್ಳಿ(54*) ಅವರ ಭರ್ಜರಿ ಬ್ಯಾಟಿಂಗ್ ಹಾಗೂ ರಾಕೇಶ್ ಅವರ ಆಕರ್ಷಕ ಬೌಲಿಂಗ್ ನೆರವಿನಿಂದ ಅಧ್ಯಕ್ಷರ ಇಲವೆನ್ ತಂಡ 3 ರನ್ಗಳ ರೋಚಕ ಗೆಲುವು ಸಾಧಿಸಿದೆ
ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ವಾರ್ಷಿಕ ಕ್ರೀಡಾಕೂಟದ ಅಂಗವಾಗಿ ಮೈಸೂರು ವಿವಿ ಸ್ಪೋರ್ಟ್ಸ್ ಪೆವಿಲಿಯನ್ ಮೈದಾನದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಅಧ್ಯಕ್ಷರ ಇಲವೆನ್ ತಂಡ 8 ಓವರ್ಗಳಲ್ಲಿ 1 ವಿಕೆಟ್ ನಷ್ಟಕ್ಕೆ 88 ರನ್ಗಳಿಸಿತು. ತಂಡದ ಪರ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ TV9 ವರದಿಗಾರ ದಿಲೀಪ್ ಚೌಡಳ್ಳಿ(54*) ರನ್ಗಳಿಸಿ ಮಿಂಚಿದರು.
ಬಳಿಕ 89 ರನ್ಗಳ ಟಾರ್ಗೆಟ್ ಚೇಸ್ ಮಾಡಿದ ಉಪಾಧ್ಯಕ್ಷರ ಇಲವೆನ್, ನಿಗದಿತ 8 ಓವರ್ಗಳಲ್ಲಿ 9 ವಿಕೆಟ್ಗಳನ್ನ ಕಳೆದುಕೊಂಡು 85 ರನ್ಗಳಿಸುವ ಮೂಲಕ 3 ರನ್ಗಳ ವಿರೋಚಿತ ಸೋಲು ಕಂಡಿತು. ಒಂದು ಹಂತದಲ್ಲಿ ಸುಲಭವಾಗಿ ಚೇಸ್ ಮಾಡುವ ಸೂಚನೆ ನೀಡಿದ್ದ ಉಪಾಧ್ಯಕ್ಷರ ಇಲವೆನ್ ತಂಡ ಸತತವಾಗಿ ವಿಕೆಟ್ಗಳನ್ನ ಕಳೆದುಕೊಂಡು ಸೋಲಿನ ಆಘಾತ ಕಂಡಿತು. ಉತ್ತಮ ಬೌಲಿಂಗ್ ದಾಳಿ ನಡೆಸಿದ ರಾಕೇಶ್ 3 ವಿಕೆಟ್ಗಳನ್ನ ಪಡೆದು ತಂಡದ ಗೆಲುವಿಗೆ ಕಾರಣರಾದರು. ಪಂದ್ಯದಲ್ಲಿ ಬ್ಯಾಟಿಂಗ್ ಹಾಗೂ ಬೌಲಿಂಗ್ನ ಆಲ್ರೌಂಡ್ ಪ್ರದರ್ಶನ ನೀಡಿದ ದಿಲೀಪ್ ಚೌಡಳ್ಳಿ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು.