ಮೈಸೂರು : ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಮೈಸೂರಿನಲ್ಲಿ ಮತ್ತೆ ಮಹಿಷಾ ದಸರಾ ಆಚರಣೆ ವಿಚಾರ ಮುನ್ನಲೆಗೆ ಬಂದಿದೆ.
ಬಿಜೆಪಿ ಕಾಲಾವಧಿಯಲ್ಲಿ ಅನುಮತಿ ನಿರಾಕರಣೆ ಹಿನ್ನೆಲೆ ನಿಂತುಹೋಗಿದ್ದ ಮಹಿಷಾ ದಸರಾ
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಮತ್ತೆ ಮುನ್ನೆಲೆಗೆ ಬಂದಿದೆ ಈ ವಿಷಯವಾಗಿ
ಇಂದು ಮೈಸೂರಿನಲ್ಲಿ ಮಹಿಷಾ ದಸರ ಆಚರಣೆ ಸಮಿತಿ ವತಿಯಿಂದ ಸುದ್ದಿಗೋಷ್ಠಿ ನಡೆಸಲಾಯಿತು.
ಕಳೆದ 2015 ರಿಂದ ಮಹಿಷಾ ದಸರಾ ಪ್ರಾರಂಭಿಸಿ ಯಶಸ್ವಿಯಾಗಿ ಆಚರಿಸಿಕೊಂಡು ಬಂದಿದ್ದೇವು.
ಬಳಿಕ ಬಿಜೆಪಿ ಸರ್ಕಾರ ಆಡಳಿತಕ್ಕೆ ಬಂದ ಬಳಿಕ ಆಚರಣೆಗೆ ನಿರ್ಬಂಧ ಹೇರಿ ಅನುಮತಿ ಕೊಡದೆ ನಮ್ಮ ಧಾರ್ಮಿಕ ಭಾವನೆಗಳನ್ನ ಹತ್ತಿಕ್ಕುವ ಕೆಲಸ ಮಾಡಿದರು.
ಇತಿಹಾಸದಲ್ಲಿರುವ ವಿಚಾರಗಳನ್ನು ಜನಸಾಮಾನ್ಯರಿಗೆ ತಿಳಿಸುವ ಪ್ರಯತ್ನ ಮಾಡಿದ್ದೆವು.
ಈಗಿನ ಸರ್ಕಾರ ಸಂವಿಧಾನದ ಬದ್ದವಾದ ಕಾನೂನು ಬದ್ದವಾದ ನೀತಿ ಜಾರಿಗೆ ತರಬೇಕು.
ಕಾನೂನಾತ್ಮಕ ರಕ್ಷಣೆ ಕೊಟ್ಟು ಮಹಿಷಾ ದಸರಾ ಆಚರಣೆ ನಿರಂತರವಾಗಿ ಮುಂದುವರೆಸಿಕೊಂಡು ಹೋಗಲು ಅವಕಾಶ ಮಾಡಿಕೊಡಬೇಕು ಮಾಜಿ ಮೇಯರ್ ಪುರುಷೋತ್ತಮ್ ಹೇಳಿದರು