ಮೈಸೂರು : ಆತ್ಮಹತ್ಯೆಗೆ ಯತ್ನಿಸಿದ್ದ ಮಂಡ್ಯ ಬಸ್ ಕಂಡಕ್ಟರ್ ಜಗದೀಶ್ ಅವರ ಆರೋಗ್ಯವನ್ನು ಮಾಜಿ ಸಿಎಂ ಕುಮರಸ್ವಾಮಿ ವಿಚಾರಿಸಿದ್ದಾರೆ.
ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸದ್ಯ ಜಗದೀಶ್ ವೆಂಟಿಲೇಟರ್ನಲ್ಲಿ ಇದ್ದಾರೆ.
ಸರ್ಕಾರ ಬಂದು ಐವತ್ತು ದಿನ ಆಗಿಲ್ಲ.
ವರ್ಗಾವಣೆ ಮಾಡಿಕೊಳ್ಳುವುದಾದರೆ ಮಾಡಿಕೊಳ್ಳಲಿ.
ಆದರೆ ಈ ರೀತಿ ಮಾಡುವುದು ಸರಿಯಲ್ಲ.
ಜಗದೀಶ್ ಪತ್ನಿ ಪಂಚಾಯತ್ ಸದಸ್ಯರು
ಪಂಚಾಯತ್ ಅಧ್ಯಕ್ಷ- ಉಪಾಧ್ಯಕ್ಷ ಮೀಸಲಾತಿ ಬಂದಿದೆ.
ಆದರೆ ಇನ್ನೂ ಒಂದು ತಿಂಗಳಾಗಿಲ್ಲ
ಆಗಲೇ ರಾಜಕಾರಣ ಆರಂಭಿಸಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು.
ಊರಿನಲ್ಲಿರುವ ರೌಡಿ, ಚೇಲಾ ಮಹದೇವ ಎಂಬಾತ ಅವರ ಕುಟುಂಬಕ್ಕೆ ಕಿರುಕುಳ ನೀಡಿದ್ದಾನೆ.
ಈ ಹೆಣ್ಣು ಮಗಳು ಜೆಡಿಎಸ್ ಪಕ್ಷ ಬಿಡುವಂತೆ, ಕಾಂಗ್ರೆಸ್ ಸೇರುವಂತೆ ಒತ್ತಡ ಏರಿದ್ದಾನೆ.
ಮತ್ತೊಂದೆಡೆ ಜಗದೀಶ್ ಗೆ ಅಧಿಕಾರಿಗಳ ಮೂಲಕ ಕಿರುಕುಳ ಕೊಡಿಸಿದ್ದಾರೆ ಡೆತ್ ನೋಟ್‌ನಲ್ಲಿ ಜಗದೀಶ್ ಅವರು ಸ್ಪಷ್ಟವಾಗಿ ಬರೆದಿದ್ದಾರೆ.
ಸಚಿವರ ಆದೇಶ ಇದೆ, ಒತ್ತಡ ಇದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಈ ಸರ್ಕಾರಕ್ಕೆ ಮಾನ ಮರ್ಯಾದೆ ಇದ್ದರೆ ಅವರನ್ನ ಮಂತ್ರಿ ಸ್ಥಾನದಿಂದ ಕೆಳಗಿಳಿಸಬೇಕು ಎಂದರು.
ಮಂತ್ರಿ ಸ್ಥಾನ ಏನು ಶಾಶ್ವತಾನ?
ಘಟನೆ ಸಂಬಂಧ ಅಧಿಕಾರಿಗಳನ್ನ ಕೇಳಿದರೆ ಇನ್ನೂ ವ್ಯಕ್ತಿ ಸತ್ತಿಲ್ಲ.ಆ ಕಾರಣಕ್ಕೆ ಎಫ್‌ಐ ಆರ್ ಹಾಕಿಲ್ಲ ಅಂತಾರೆ.
ಇವರಿಗೆ ಮತ ಹಾಕಿದ್ದು ಜನರ ಜೀವದ ಜೊತೆ ಚೆಲ್ಲಾಟ ಆಡಲು ಅಲ್ಲ .ನೆನ್ನೆ ಅವರ ಕುಟುಂಬಕ್ಕೆ ಕರೆ ಮಾಡಿದಾಗ ಕುಟುಂಬದವರು ಅತ್ತಿದ್ದರು.
ರಾತ್ರಿ 1.30 ಕ್ಕೆ ಮೈಸೂರಿಗೆ ಶಿಫ್ಟ್ ಮಾಡಿದ್ದಾರೆ.
ವೈದ್ಯರು ಕೈಲಾದ ಪ್ರಯತ್ನ ಮಾಡುತ್ತೇನೆ ಎಂದಿದ್ದಾರೆ
ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದ ಮಾಜಿ ಸಿಎಂ.
ತಕ್ಷಣ ಈ ಮಂತ್ರಿಯನ್ನ ವಜಾ ಮಾಡಿ, ಸರಿಯಾದ ತನಿಖೆ ನಡೆಸಿಬೇಕು ಎಂದು ಹೇಳಿದರು.
ಕೀಳು ಮಟ್ಟದ ರಾಜಕಾರಣ ಮಾಡುತ್ತಿದ್ದಾರೆ.
ನನ್ನ ಕ್ಷೇತ್ರ ಚನ್ನಪಟ್ಟಣದಲ್ಲಿ ನನ್ನ ಅಧಿಕಾರಿರದ ಅವಧಿಯಲ್ಲಿ ಒಬ್ಬನೇ ಅಧಿಕಾರಿಯನ್ನ ಟ್ರಾನ್ಸ್ಫರ್ ಮಾಡಿಲ್ಲರಾಜ್ಯದಲ್ಲಿ ಹೊಸ ಹೊಸ ಟ್ಯಾಕ್ಸ್ ಗಳು ಆರಂಭವಾಗಿವೆಟ್ಯಾಕ್ಸ್ ನೀಡಿದರೆ ಮಾತ್ರ ಇವರಿಗೆ ಲಾಭ
ಚಲುವರಾಯಸ್ವಾಮಿ ಜೀವದ ಜೊತೆ ಚೆಲ್ಲಾಟ ಆಡುತ್ತಿದ್ದಾರೆ.
ವಿಧಾನಸೌಧದಲ್ಲಿ ಈ ವಿಚಾರವನ್ನೇ ಪ್ರಶ್ನೆ ಎತ್ತುತ್ತೇನೆ.
ಕಾಂಗ್ರೆಸ್ ಶಾಸಕರೇ ಪರದಾಡುತ್ತಿದ್ದಾರೆ
ಪೆನ್ ಡ್ರೈವ್ ದಾಖಲೆಯನ್ನ ಸೂಕ್ತ ಸಮಯದಲ್ಲಿ ಮಾತನಾಡುವೆ ಈ ಸರ್ಕಾರ ಏನು ಮಾತಾಡಬೇಕು ಎಲ್ಲವನ್ನೂ ಮಾತನಾಡಲಿ.ಹಿಟ್ ಅಂಡ್ ರನ್ ಅಂತಾರೆ, ಏನಾದರೂ ಹೇಳಿಕೊಳ್ಳಲಿ ಅಂತಾರೆ.
ಅವರು ಹೀಗೆ ಮಾತನಾಡುತ್ತಿರಲಿ, ಸಮಯಕ್ಕೆ ಸರಿಯಾಗಿ ಬಿಡುಗಡೆ ಮಾಡ್ತೀನಿ ಎಂದರು.
ವರ್ಗಾವಣೆ ದಂಧೆ ಸಿಎಂ ನೇತೃತ್ವದಲ್ಲೇ ನಡೆಯುತ್ತಿದೆ.
ವರ್ಗಾವಣೆ ಆದೇಶ ಆಗುತ್ತದೆ.
ತಕ್ಷಣ ಅದು ಬದಲಾವಣೆ ಆಗುತ್ತದೆ.
ಸರ್ಕಾರ ನಡೆಯಬೇಕಾದರೆ ವರ್ಗಾವಣೆ ಅನಿವಾರ್ಯ.
ಆದರೆ ಯಾವ ಅಳತೆಗೋಲು ಇಟ್ಟುಕೊಂಡು ವರ್ಗಾವಣೆ ಮಾಡುತ್ತಿದ್ದೀರಿ.ಇಷ್ಟೊಂದು ಅನುಭವ ಇಟ್ಕೊಂಡು ನಿಮಗೆ ಗೊತ್ತಿಲ್ಲ.ಪ್ರಮುಖ ಎಲ್ಲಾ ಹುದ್ದೆಗಳೆಲ್ಲವೂ ದುಡ್ಡಿನಿಂದಲೇ ವರ್ಗಾವಣೆ ಆಗ್ತಿವೆ ಎಂದರು.
ಬಿಜೆಪಿಯ ವಿಪಕ್ಷ ನಾಯಕನ ಕುರಿತು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಕುಮಾರಸ್ವಾಮಿ ಬಿಜೆಪಿಯವರು ವಿಪಕ್ಷ ಸ್ಥಾನದಲ್ಲಿದ್ದಾರೆ.
ನಾವು ಕೂಡ ವಿಪಕ್ಷ ಸ್ಥಾನದಲ್ಲಿ ಇದ್ದೇವೆ.
ಬಿಜೆಪಿಯಲ್ಲಿ ಹಲವರು ಸಮರ್ಥ ನಾಯಕರಿದ್ದಾರೆ.
ಬಿಜೆಪಯಲ್ಲಿಯೇ ವಿಪಕ್ಷ ನಾಯಕರು ಆಗುವವರು ಇದ್ದಾರೆ.ನನ್ನ ಆಸ್ತಿಯನ್ನು ಕುರಿತು ಇಂಟರ್‌ನ್ಯಾಷನಲ್ ಸಂಸ್ಥೆಯಿಂದ ತನಿಖೆ ನಡೆಸಲಿ ಎಂದು ಸವಾಲ್ ಹಾಕಿದರು.