ಮೈಸೂರು : ನಾಗಮಂಗಲದ KSRTC ಕಂಡಕ್ಟರ್ ಆತ್ಮಹತ್ಯೆಗೆ ಯತ್ನ ವಿಚಾರ ಇದೀಗ ರಾಜಕೀಯಕ್ಕೆ ತಿರುಗಿದೆ.
ಮೈಸೂರಿನ ಖಾಸಗಿ ಆಸ್ಪತ್ರೆಯ ICUನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕಂಡಕ್ಟರ್ ಆರೋಗ್ಯ ವಿಚಾರಿಸಿ ಮಾಧ್ಯಮದವರೊಂದಿಗೆ ಮಾತನಾಡಿದ ಮಾಜಿ ಶಾಸಕ ಸುರೇಶ್ ಗೌಡ ಕಾಂಗ್ರೆಸ್ ಶಾಸಕರಿಂದ ಜಿಲ್ಲೆಯಲ್ಲಿ ನಮ್ಮ ಕಾರ್ಯಕರ್ತರ ಟಾರ್ಗೆಟ್ ಆಗುತ್ತಿದೆ.
ನಾಗಮಂಗಲದಲ್ಲಿ ಒಂದು ಸರ್ಕಾರವೇ ಇದೆ.
ಎರಡು ತಿಂಗಳಿಂದ ಕಿರುಕುಳ ಆಗುತ್ತಿದೆ.
ಜಗದೀಶ್ ಈ ಬಗ್ಗೆ ಆತನ ತಂದೆ ತಾಯಿ ಹಾಗೂ ನನ್ನ ಬಳಿಯೂ ಹೇಳಿಕೊಂಡಿದ್ದ.
ಚುನಾವಣೆ ಆದ ಬಳಿಕ ಕ್ಷೇತ್ರದಲ್ಲಿ ಮೂರ್ನಾಲ್ಕು ಆತ್ಮಹತ್ಯೆಗಳಾಗಿದೆ.
ಕ್ಷೇತ್ರದಲ್ಲಿ ದ್ವೇಷ, ಸ್ವಜನಪಕ್ಷಪಾತ ಶುರು ಆಗಿದೆ.
ಒಂದು ರೀತಿ ಟ್ರಾನ್ಸ್ಫರ್ ಥ್ರೀಟ್ ಆಗಿದೆ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದರು.
ಜಿಲ್ಲೆಯಲ್ಲಿ ಎಲ್ಲರನ್ನು ಟಾರ್ಗೆಟ್ ಮಾಡಲಾಗುತ್ತಿದೆ.
ಯಾರು ಅವರ ವಿರುದ್ಧ ಕೆಲಸ ಮಾಡುತ್ತಾರೆ ಅವರ ಮೇಲೆ ಟಾರ್ಗೆಟ್ ಮಾಡಿದ್ದಾರೆ.
ಇಡೀ ಜಿಲ್ಲೆಯಲ್ಲಿ ಜೆಡಿಎಸ್ ಕಾರ್ಯಕರ್ತರ ಟಾರ್ಗೆಟ್ ಆಗಿದೆ.
ಕ್ಷೇತ್ರದಲ್ಲಿ ದುರಂಕಾರ ಎನ್ನುವುದು ಮೇಲೆ ಹೋಗಿಬಿಟ್ಟಿದೆ.
ಜಿಲ್ಲೆಯಲ್ಲಿ ಅಧಿಕಾರಿಗಳಿಗೆ ತೊಂದರೆ ಆಗಿದೆ.
ನಾಗಮಂಗಲ ಕ್ಷೇತ್ರದಲ್ಲಿ ಒಂದು ಸರ್ಕಾರವೇ ರಚನೆ ಆಗಿದೆ ಎಂದು ಸಚಿವ ಚಲುವರಾಯಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದರು.