ಟೊಮ್ಯಾಟೊ ರೇಟ್ ಸೆಂಚುರಿ ದಾಟಿ ಮುನ್ನುಗ್ಗುತ್ತಿದೆ
1ಕೆ.ಜಿ ಟೊಮ್ಯಾಟೊಗೆ 120 ರಿಂದ 140 ರೂಪಾಯಿಯಾಗಿದ್ದು ಟೊಮ್ಯಾಟೊ ಬೆಲೆ ಗಗನಕ್ಕೇರಿದೆ.
ಟೊಮೋಟೊ ಬೆಲೆ ಜಾಸ್ತಿಯಾಗಿದ್ದು ಗ್ರಾಹಕರ ಕೈ ಸುಡುತ್ತಿದೆ. ಮತ್ತೊಂದು ಕಡೆ ಟಮೋಟೋ ಬೆಳೆದ ರೈತರ ಮೊಗದಲ್ಲಿ ಹರ್ಷ ಕಾಣುತ್ತಿದೆ.
ಈ ಬಾರಿ ಟೊಮ್ಯಾಟೊ ಬೆಳೆದ ರೈತರಿಗೆ ಬಂಪರ್ ಗಿಫ್ಟ್ ಸಿಕ್ಕಿದೆ.ಮಳೆ ಅಭಾವ ಟೊಮ್ಯಾಟೊ ಬೆಳೆಯಲ್ಲಿ ಗಣನೀಯ ಇಳಿಕೆಯಾಗಿದ್ದು
ಅಗತ್ಯ ವಸ್ತುಗಳ ಬೆಲೆ ಏರಿಕೆ ಜೊತೆ ತರಕಾರಿಗಳ ಬೆಲೆಯಲ್ಲೂ ಭಾರಿ ಏರಿಕೆಯಾಗಿದೆ.
ಬೆಲೆ ಏರಿಕೆಯಿಂದ ಸಂಕಷ್ಟದ ಸುಳಿಯಲ್ಲಿ ಗ್ರಾಹಕ ಸಿಲುಕಿದ್ದಾನೆ.ಇತ್ತ ಬೇಳೆಕಾಳು,ಅಕ್ಕಿ,ಗೋಧಿ ಸೇರಿದಂತೆ ಹಲವು ದಿನಸಿ ಬೆಲೆಗಳ ದರ ಕೂಡ ಹೆಚ್ಚಳ ಕಂಡಿದೆ.
ಖರೀದಿ ಮಾಡಲು ಹಿಂದೆ ಮುಂದೆ ನೋಡುವ ಪರಿಸ್ಥಿತಿಯಲ್ಲಿ ಗ್ರಾಹಕನಿದ್ದಾನೆ.
ಮಳೆ ಬಾರದೆ ಇರುವ ಕಾರಣ ರೈತರು ಸರಿಯಾಗಿ ಬೆಳೆಯುತ್ತಿಲ್ಲ. ಹಾಗಾಗಿ ಮಾರುಕಟ್ಟೆಗೆ ಟೊಮ್ಯಾಟೊ ಹೆಚ್ಚಾಗಿ ಬರುತ್ತಿಲ್ಲ ಆದ್ದರಿಂದ ಸಹಜವಾಗಿ ಬೆಲೆ ಜಾಸ್ತಿಯಾಗಿದೆ.