ಮೈಸೂರು-ಬೆಂಗಳೂರು ಎಕ್ಸ್ಪ್ರೆಸ್ ಹೈವೇ ಟೋಲ್ ದರದಲ್ಲಿ ಹೆಚ್ಚಳ ಹಿನ್ನೆಲೆ ಬಸ್ ದರದಲ್ಲೂ ಗಣನೀಯ ಹೆಚ್ಚಳವಾಗಿ ಪ್ರಯಾಣಿಕರಿಗೆ ಜೇಬಿಗೆ ಕತ್ತರಿ ಹಾಕಲಾಗುತ್ತಿದೆ.
ಎರಡೆರಡು ಕಡೆ ಟೋಲ್ ಸಂಗ್ರಹಕ್ಕೆ ಮುಂದಾದ ರಾಷ್ಟ್ರೀಯ ಹೆಸರು ಪ್ರಾಧಿಕಾರ ಈ ಹಿನ್ನಲೆಯಲ್ಲಿ ಬಸ್ ದರ ಹೇರಿಕೆಯಾಗಿದೆ. ಶ್ರೀರಂಗಪಟ್ಟಣ ಮತ್ತು ಬಿಡದಿ ಬಳಿ ಟೋಲ್ ಸಂಗ್ರಹ ಮಾಡುತ್ತಿದ್ದು
ಕೆಎಸ್ಆರ್ಟಿಸಿ ಬಸ್ ದರದಲ್ಲೂ ಹೆಚ್ವಳವಾಗಿದೆ.
ಬೆಲೆ ಏರಿಕೆಯಿಂದ ಕಂಗೆಟ್ಟಿರುವ ಜನರಿಗೆ ಈಗ ಪ್ರಯಾಣದ ದರ ಹೆಚ್ಚಳದಿಂದ ಗಾಯದ ಮೇಲ ಬರೆ ಎಳೆಯಲು ಎಳೆದಂತೆ ಆಗಿದೆ.
ಪದೆ ಪದೆ ಟೋಲ್ ದರದಲ್ಲಿ ಏರಿಕೆ ಹಿನ್ನಲೆ
ಟೋಲ್ ದರದ ಏರಿಕೆಯನ್ನ ಪ್ರಯಾಣಿಕರ ಮೇಲೆ ಕೆಎಸ್ಆರ್ಟಿಸಿ ಹಾಕಿದೆ.
ಬೆಂಗಳೂರು ಮೈಸೂರು ಹೈವೆ ರಸ್ತೆಯಲ್ಲಿ ಸಂಚಾರ ಮಾಡುವ ಬಸ್ ಗಳ ದರದಲ್ಲಿ ಗಣನೀಯ ಏರಿಕೆಯಾಗಿದ್ದು ಇಂದಿನಿಂದ ಸಾಮಾನ್ಯ ಬಸ್ ದರ 15 ಮತ್ತು ಐಶಾರಾಮಿ ಬಸ್ ಗಳಲ್ಲಿ 30 ರೂ ಹೆಚ್ಚಳವಾಗಿದೆ.
ಮೈಸೂರಿಂದ ಬೆಂಗಳೂರಿಗೆ ನಿನ್ನೆವರಗೆ 170 ರೂ ಇದ್ದ ದರ ಇಂದಿನಿಂದ 185 ರೂಪಾಯಿ ಆಗಿದೆ.
ಐರಾವತ, ರಾಜಹಂಸ ಬಸ್ ಗಳಲ್ಲಿ 260 ಇದ್ದದ್ದು ಇಂದಿನಿಂದ 290 ರೂಗೆ ಹೆಚ್ಚಳ ಕಂಡಿದೆ.
ದಿಢೀರ್ ಹೆಚ್ಚಳಕ್ಕೆ ಪ್ರಯಾಣಿಕರ ಆಕ್ರೋಶ ವ್ಯಕ್ತಪಡಿಸುತ್ತಿದ್ದು ಯಾರು ಏನೇ ಮಾಡಿದರು ಕೊನೆಗೆ ನಮ್ಮ ತಲೆ ಮೇಲೆ ಹಾಕೋದು ಎಂದು ಜನರು ಶಾಪ ಹಾಕುತ್ತಿದ್ದಾರೆ