ಬೆಂಗಳೂರು : ಕೊನೆಗೂ ಅನ್ನಭಾಗ್ಯದ ಹಣಭಾಗ್ಯಕ್ಕೆ ಮುಹೂರ್ತ ಕೂಡಿಬಂದಿದೆ. ಇದೇ ಜುಲೈ 9, 10 ಕ್ಕೆ ಅಕೌಂಟ್‍ಗೆ ಹಣ ಹಾಕಲು ಸರ್ಕಾರ ಮುಂದಾಗಿದೆ. ವಿರೋಧ ಪಕ್ಷಗಳ ಪಟ್ಟು ಹಾಗೂ ಪ್ರತಿಭಟನೆ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಈ ನಿರ್ಧಾರಕ್ಕೆ ಬಂದಿದೆ.
ಕಾಂಗ್ರೆಸ್ ಸರ್ಕಾರದ ಅಧಿಕಾರಕ್ಕೆ ಬರುವ ಮುನ್ನ ಪ್ರಣಾಳಿಕೆಯಲ್ಲಿ 10 ಕೆ.ಜಿ ಅಕ್ಕಿ ಕೊಡುವ ಭರವಸೆ ನೀಡಿದರು. ಆದರೆ ಕಾಲಕ್ರಮೇಣ ಕೇಂದ್ರ ಸರ್ಕಾರ ತಮ್ಮ ಪಾಲಿನ ಅಕ್ಕಿಯನ್ನಷ್ಟೇ ನೀಡುತ್ತೇವೆ ಎಂದು ಹೇಳಿ ಕೈತೊಳೆದುಕೊಂಡಿತ್ತು. ಈಗ 5 ಕೆ.ಜಿ ಅಕ್ಕಿ ಜೊತೆ 5 ಕೆ.ಜಿಗೆ ಹಣ ನೀಡುವ ಯೋಜನೆಯನ್ನು ಸರ್ಕಾರ ಜಾರಿಗೊಳಿಸಿದೆ.
ಈ ನಡುವೆ ಅಕ್ಕಿ ಹಣ ನೀಡುವುದು ಮತ್ತಷ್ಟು ವಿಳಂಬ ಅನ್ನೋದನ್ನ ಸ್ಪಷ್ಟವಾಗಿ ಹೇಳ್ತಿದೆ. ಸರ್ಕಾರದಿಂದ ಈಗ ಅಕೌಂಟ್‍ಗೆ ಹಣ ಹಾಕಲು ಸೂಚನೆ ನೀಡಲಾಗಿದೆ. ಅಧಿಕಾರಿಗಳು ಜುಲೈ 15ರಂದು ಹಣಹಾಕುವ ಚಿಂತನೆಯಲ್ಲಿದ್ದರು. ಇದೀಗ ಜುಲೈ 10ರೊಳಗೆ ಹಣ ಹಾಕುವಂತೆ ಸರ್ಕಾರ ಸೂಚಿಸಿದ್ದು, ಜುಲೈ 9ರಂದೇ ಅಕೌಂಟ್‍ಗೆ ಹಣಹಾಕಲು ಆಹಾರ ಇಲಾಖೆಯಿಂದ ಚಿಂತನೆ ನಡೆಸಲಾಗ್ತಿದೆ ಎಂದು ಹೇಳಲಾಗುತ್ತಿದೆ
ಅನ್ನ `ಹಣ’ಭಾಗ್ಯ ಸಿದ್ಧತೆ ಹೇಗಿದೆ?: ಜುಲೈ 9 ಅಥವಾ 10ರಂದೇ ಅಕೌಂಟ್‍ಗೆ ಹಣ ಹಾಕುವ ಸಾಧ್ಯತೆಗಳಿದ್ದು, ಜಿಲ್ಲಾವಾರು ಖಾತೆಗೆ ಹಣ ಹಾಕಲು ತಯಾರಿ ನಡೆಸಲಾಗುತ್ತಿದೆ. ಪ್ರತಿನಿತ್ಯ 2 ಜಿಲ್ಲೆ ಆಯ್ಕೆ ಮಾಡಿ ಹಣ ಹಾಕಲು ಚಿಂತನೆ ನಡೆಯುತ್ತಿದೆ.
ಆರಂಭಿಕ ಹಂತದಲ್ಲಿ ಮೈಸೂರು, ಕೋಲಾರ ಜಿಲ್ಲೆಗಳಿಗೆ ಹಣ ಜಮೆ ಹಾಗೂ ಹಂತ ಹಂತವಾಗಿ ಎರೆಡೆರಡು ಜಿಲ್ಲೆಗಳಿಗೆ ಹಣ ಹಾಕಲು ನಿರ್ಧಾರ ಮಾಡಲಾಗುತ್ತದೆ. 3 ತಿಂಗಳು ಪಡಿತರ ಅಕ್ಕಿ ತೆಗೆದುಕೊಳ್ಳದೇ ಇರೋರಿಗೆ ಅಕ್ಕಿ ಹಣ ಅನುಮಾನವಿದೆ. ಏಪ್ರಿಲ್, ಮೇ, ಜೂನ್‍ನಲ್ಲಿ ಅಕ್ಕಿ ತೆಗೆದುಕೊಳ್ಳದಿದ್ರೆ ಹಣ ನೀಡೋದು ಡೌಟು ಎನ್ನಲಾಗಿದೆ