ರೋಚಕ ಹೋರಾಟದಲ್ಲಿ ಭಾರತ ಫುಟ್‌ಬಾಲ್ ತಂಡ 2023ರ ಸಾಲಿನ ಸ್ಯಾಫ್ ಫುಟ್‌ಬಾಲ್ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದೆ. ಸಡನ್‌ಡೆತ್ ಪೆನಾಲ್ಟಿಯಲ್ಲಿ ಭಾರತ ಕುವೈಟ್ ತಂಡವನ್ನು ಮಣಿಸುವ ಮೂಲಕ 9ನೇ ಬಾರಿ ಪ್ರಶಸ್ತಿ ಜಯಿಸಿತು.
ಕಂಠೀರವ ಮೈದಾನದಲ್ಲಿ ನಡೆದ ಫೈನಲ್ ಪಂದ್ಯದ ನಿಗದಿತ 90 ನಿಮಿಷದ ವೇಳೆಗೆ ಎರಡು ತಂಡಗಳು 1-1 ಗೋಲು ಹೊಡೆದ ಪರಿಣಾಮ ಫಲಿತಾಂಶ ನಿರ್ಧಾರಕ್ಕೆ ಹೆಚ್ಚುವರಿ ಸಮಯ ನೀಡಲಾಯಿತು. 30 ನಿಮಿಷ ಅವಧಿಯ ಆಟದಲ್ಲಿ ಇತ್ತಂಡಗಳ ಪರ ಯಾವುದೇ ಗೋಲು ಸಿಡಿಯದ ಕಾರಣ ಪೆನಾಲ್ಟಿಗೆ ಮೊರೆ ಹೊಗಲಾಯಿತು
5 ಪೆನಾಲ್ಟಿ ಅವಕಾಶದಲ್ಲಿ ಭಾರತ ಮತ್ತು ಕುವೈಟ್ ತಲಾ 4 ಗೋಲು ಹೊಡೆದ ಪರಿಣಾಮ ಪಂದ್ಯ ಸಡನ್‌ಡೆತ್‌ನತ್ತ ತಿರುಗಿತು. ಈ ವೇಳೆ ಭಾರತದ ಮಹೇಶ್ ಗೋಲು ಹೊಡೆದರೆ ಕುವೈಟ್ ಆಟಗಾರ ಹಜಿಯಾ ಹೊಡೆದ ಚೆಂಡನ್ನು ಗೋಲ್ ಕೀಪರ್ ಗುರುಪ್ರೀತ್ ಸಿಂಗ್ ತಡೆಯುವ ಮೂಲಕ ಭಾರತಕ್ಕೆ ಗೆಲುವು ತಂದುಕೊಟ್ಟರು. ಈ ಹಿಂದೆ ಭಾರತ 1993, 1997, 1999, 2005, 2009, 2011, 2015, 2021 ರಲ್ಲಿ ಪ್ರಶಸ್ತಿ ಜಯಿಸಿತ್ತು.