ಮೈಸೂರು : ಮೈಸೂರು-ಬೆಂಗಳೂರು ಹೈವೇಯನ್ನು ವೈಜ್ಞಾನಿಕವಾಗಿ ನಿರ್ಮಾಣ ಮಾಡಲಾಗಿದೆ.
ಹೈವೇಯೇನು ರೇಸಿಂಗ್ ಟ್ಯ್ರಾಕ್ ಅಲ್ಲ, ಇದು ಹೈವೇ ರಸ್ತೆಯಷ್ಟೇ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು.
ವಾಹನ ಸವಾರರು ಮಿತಿಮೀರಿದ ವೇಗದಲ್ಲಿ ಸಂಚಾರ ಮಾಡುತ್ತಿರುವುದರಿಂದ ಅಪಘಾತಗಳು ಸಂಭವಿಸುತ್ತಿವೆ.
ಮೈಸೂರು ಕೊಡಗು ಸಂಸದ ಪ್ರತಾಪ್ ಸಿಂಹ ಮೈಸೂರಿನಲ್ಲಿ ಹೇಳಿಕೆ.
ಮೈಸೂರು ಬೆಂಗಳೂರು ಹೈವೆಯನ್ನು 120 ಕಿ ಮೀ ವೇಗದಲ್ಲಿ ಸಂಚರಿಸಲು ಅನುಕೂಲವಾಗುವಂತೆ ನಿರ್ಮಿಸಲಾಗಿದೆ.
80-100 ಕಿ ಮೀ ವೇಗದಲ್ಲಿ ಸಂಚರಿಸಿದರೂ ಒಂದೂವರೆ ಗಂಟೆಯಲ್ಲಿ ಮೈಸೂರು ಬೆಂಗಳೂರು ತಲುಪಬಹುದು.
ಆದರೆ ಈ ಮಿತಿಯನ್ನು ದಾಟಿ ವಾಹನ ಚಲಾಯಿಸಿದರೆ ಅದರಲ್ಲೂ ಕಾರುಗಳು ನಿಯಂತ್ರಣಕ್ಕೆ ಸಿಗದೇ ಅಪಘಾತಗಳು ಸಂಭವಿಸುತ್ತವೆ ಎಂದರು.
ಕೆಲ ವಾಹನ ಸವಾರರಿಗೆ ಮೈಸೂರು-ಬೆಂಗಳೂರು ಹೈವೇಗೆ ಇಳಿಯುತ್ತಿದ್ಧಂತೆ ಹುಮ್ಮಸ್ಸು ಬಂದು ಬಿಡುತ್ತದೆ.
ಹುಚ್ಚು ಬಂದಂತೆ ವಾಹನ ಚಲಾಯಿಸುವುದರಿಂದ ಅಪಘಾತಗಳು ಸಂಭವಿಸುತ್ತಿವೆ.
ಹೈವೇಯನ್ನು ವೈಜ್ಞಾನಿಕವಾಗಿ ನಿರ್ಮಾಣ ಮಾಡಲಾಗಿದೆ.
ಹೈವೆಯನ್ನು ಅವೈಜ್ಞಾನಿಕವಾಗಿ ನಿರ್ಮಾಣ ಮಾಡಿರುವುದು ಸಾಬೀತಾದರೆ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳನ್ನು ಕರೆಸುತ್ತೇನೆ.
ಮೈಸೂರು-ಬೆಂಗಳೂರು ಹೈವೇಯನ್ನು ಸಂಪೂರ್ಣವಾಗಿ ಅಭಿವೃದ್ಧಿ ಮಾಡಲು ಇನ್ನೂ 8-10 ತಿಂಗಳು ಬೇಕಾಗಲಿದೆ.
30 ಕಿ ಮೀ ಗೆ ಒಂದರಂತೆ ಟೋಯಿಂಗ್ ವಾಹನ ಹಾಗು ಆಂಬ್ಯುಲೆನ್ಸ್ ಅನ್ನು ವ್ಯವಸ್ಥೆ ಮಾಡುತ್ತೇವೆ.
ಹೈವೇಯಲ್ಲಿ ದ್ವಿಚಕ್ರ ಹಾಗೂ ತ್ರಿಚಕ್ರ ವಾಹನಗಳ ಓಡಾಟಕ್ಕೆ ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ ಎಂದು ತಿಳಿಸಿದರು.