ಮೈಸೂರು : ಕೆಲ ನಿಜ ಸಂಗತಿಗಳನ್ನ ಜನರ ಮುಂದೆ ಮಾಧ್ಯಮದ ಮೂಲಕ ತಿಳಿಸಲು ಇಚ್ಚಿಸುತ್ತೇವೆ.
ವಿಧಾನಸಭಾ ಚುನಾವಣೆ ನಡೆದು ಒಂದು ತಿಂಗಳು ಕಳೆದಿದೆ.ಸಿದ್ದರಾಮಯ್ಯ ನೇತೃತ್ವದ ಸರ್ಕಾರ ರಚನೆಯಾಗಿ ಟೇಕ್ ಆಫ್ ಆಗಿದೆ.ಬಿಜೆಪಿ ಜೆಡಿಎಸ್ ಪಕ್ಷಗಳು ಅವರ ಕೆಲಸ ಮಾಡಬೇಕು.ಅದನ್ನ ಬಿಟ್ಟು ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಬಿಜೆಪಿ ಜೆಡಿಎಸ್ ನಾಯಕರು ಮಾಡುತ್ತಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಹೇಳಿದರು.
ಬಿಜೆಪಿಯ ಪ್ರತಾಪ್ ಸಿಂಹ,ಸಿಟಿ ರವಿ ಅನೇಕ ಹೇಳಿಕೆಗಳನ್ನ ನೀಡುತ್ತಿದ್ದಾರೆ.2014 ಮತ್ತು 2019ರಲ್ಲಿ ನೀವು ಯಾರ ಬಳಿ ಯಾವ ತರ ಅಡ್ಜಸ್ಟ್ ಮೆಂಟ್ ರಾಜಕಾರಣ ಮಾಡ್ಕೊಂಡಿದ್ರಿ ಉತ್ತರ ಹೇಳಿ ಎಂದು ಸಂಸದ ಪ್ರತಾಪ್ ಸಿಂಹರನ್ನ ಲಕ್ಷ್ಮಣ್ ಪ್ರಶ್ನೆ ಮಾಡಿದರು.
ಬಡವರಿಗೆ ನೀಡುವ ಅಕ್ಕಿ ವಿಚಾರದಲ್ಲಿ ಸಿದ್ದರಾಮಯ್ಯರನ್ನ ಪ್ರಶ್ನೆ ಮಾಡುವ ಯೋಗ್ಯತೆ ನಿಮಗಿದೆಯೇ.
5ಗ್ಯಾರಂಟಿ ಜಾರಿಗೊಳಿಸಿದರೆ ರಾಜ್ಯ ದಿವಾಳಿಯಾಗುತ್ತಂತೆ.ಈ ರೀತಿಯ ಅನೇಕ ಹೇಳಿಕೆಗಳನ್ನ ನೀವು ಹೇಳ್ತಿದೀರಾ.ನಿಮ್ಮ ರೀತಿ ಲೂಟಿ ಮಾಡಿ ಹಣವನ್ನ ಮನೆಯಲ್ಲಿ ಇಟ್ಟುಕೊಳ್ತಿಲ್ಲ.ಶ್ರೀಮಂತರ ಕೋಟ್ಯಂತರ ರೂ ಸಾಲ ಮನ್ನಾ ಮಾಡಿದಾಗ ದಿವಾಳಿಯಾಗ್ಲಿಲ್ವಾ.
ನಾವು ನೀಡುತ್ತಿರುವ ಯೋಜನೆಗಳು ಬಡವರ ಪರವಾದ ಯೋಜನೆಗಳು ಎಂದು ಹೇಳಿದರು.
ಬಿಜೆಪಿಯಲ್ಲಿ ವಿಪಕ್ಷ ಸ್ಥಾನದ ವಿಚಾರವಾಗಿ ಆಂತರಿಕ ಕಲಹ ನಡೆಯುತ್ತಿದೆ.ಈ ವಿಚಾರ ಮುಚ್ಚಿ ಹಾಕಲು ದಿನನಿತ್ಯ ಕಾಂಗ್ರೆಸ್ ವಿರುದ್ಧ ಹೇಳಿಕೆ ನೀಡುತ್ತಿದ್ದಾರೆ ಇದೆಲ್ಲ ಬಿಜೆಪಿಯ ಹುನ್ನಾರ ಎಂದು ಆರೋಪ ಮಾಡಿದರು.