ಮೈಸೂರು : ಒಂದು ತಿಂಗಳ ಕಾಲ ಪ್ರಧಾನಿ ಮೋದಿ ಕೊಟ್ಟಿರುವ 9ವರ್ಷಗಳ ಯೋಜನೆಯ ಜಾಗೃತಿ ಮೂಡಿಸುತ್ತೇವೆ ಎಂದು ಸುದ್ದಿಗೋಷ್ಠಿ ನಡೆಸಿ ಸಂಸದ ಪ್ರತಾಪ್ ಸಿಂಹ ಹೇಳಿದರು.
ಜೂನ್ 22ರಂದು ಕಾರ್ಯಕರ್ತರ ಸಭೆ ನಡೆಯಲಿದೆ.
ರಾಜ್ಯದ ಪ್ರಮುಖ ನಾಯಕರು ಬರಲಿದ್ದಾರೆ.
ಮೈಸೂರು ಭಾಗಕ್ಕೆ ಸಚಿವೆ ನಿರ್ಮಲ ಸೀತಾರಾಮನ್ ನೇಮಕ ಮಾಡಿದ್ದಾರೆ.
ಮೈಸೂರಿಗೆ ಮೋದಿಜಿ ರೈಲ್ವೆ,ವಿಮಾನ,ರಸ್ತೆ ನಿರ್ಮಾಣ ಕಾರ್ಯದ ಕೊಡುಗೆ ನೀಡಿದ್ದಾರೆ.
ಹತ್ತು ಸಾವಿರ ಕೋಟಿ ನೀಡಿ ಮೈಸೂರು ಬೆಂಗಳೂರು ದಶಪಥ ರಸ್ತೆ ನಿರ್ಮಾಣ ಮಾಡಿಕೊಟ್ಟಿದ್ದಾರೆ.
ವಿಮಾನ ನಿಲ್ದಾಣದಲ್ಲಿ ರನ್ ವೇ ವಿಸ್ತರಣೆಗೂ ಒಂದು ಸಾವಿರ ಕೋಟಿ ನೀಡಿದ್ದಾರೆ ಎಂದು ತಿಳಿಸಿದರು.
ಮೈಸೂರು – ಕುಶಾಲನಗರ ರಸ್ತೆ ನಿರ್ಮಾಣ ಮಾಡ್ತೇವೆ.
ರಿಂಗ್ ರಸ್ತೆಯಲ್ಲಿ ವಿದ್ಯುತ್ ವ್ಯವಸ್ಥೆ ಮಾಡಿದ್ದೇವೆ.
ಕಾಂಗ್ರೆಸ್ ಸರ್ಕಾರ ಬಂದಾಗ ರಿಂಗ್ ರಸ್ತೆಗೆ ಅನುಧಾನ ಸ್ಥಗಿತಗೊಳಿಸಿದೆ.
ಇದು ಮೈಸೂರಿನ ರಿಂಗ್ ರಸ್ತೆಗೆ ಕಾಂಗ್ರೆಸ್ ಕೊಡುಗೆಯಾಗಿದೆ.
ಕಾಂಗ್ರೆಸ್ ಸರ್ಕಾರ ಮತ್ತೆ ಕತ್ತಲಿನ ರಸ್ತೆ ಮಾಡಿದ್ದಾರೆ.
ಜಲಜೀವನ್ ಯೋಜನೆ ಮೂಲಕ ಕುಡಿಯುವ ನೀರನ್ನು ಒದಗಿಸುತ್ತಿದ್ದೇವೆ.
ಅಮೃತ್ -2 ನಲ್ಲಿಯೂ ಮೈಸೂರು ನಗರದ ವಿವಿಧ ಕಡೆಗಳಿಗೆ ನೀರು ತರುತ್ತಿದ್ದೇವೆ.
ಇಷ್ಟೆಲ್ಲಾ ಕೊಡುಗೆಗಳನ್ನು ಮೋದಿಜಿ ಮೈಸೂರಿಗೆ ನೀಡಿದ್ದಾರೆ ಎಂದರು.
ಮುಂದಿನ ಲೋಕಸಭಾ ಚುನಾವಣೆಯಲ್ಲೂ ಕ್ಷೇತ್ರದ ಜನ ನಮಗೆ ಮತ್ತೆ ಆಶೀರ್ವಾದ ಮಾಡಲಿದ್ದಾರೆ. ಇದರಲ್ಲಿ ಯಾವುದೇ ಅನುಮಾನ ಬೇಡ ಮುಂದೆಯೂ ಮೋದಿ ನೇತತ್ವದಲ್ಲಿ ಕೇಂದ್ರ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ಹೇಳಿದರು.