ಕನ್ನಡಲ್ಲಿ ಹಬ್ಬ, ಗ್ರಾಮದೇವತೆ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿರುವ ದಕ್ಷಿಣದ ಖ್ಯಾತ ಖಳನಟ ಕಜನ್ ಖಾನ್ (Kazan Khan) ನಿಧನರಾಗಿದ್ದಾರೆ. ನಿನ್ನೆ ಅವರಿಗೆ ಹೃದಯಾಘಾತವಾಗಿದ್ದು ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದರೂ, ಚಿಕಿತ್ಸೆ ಫಲಕಾರಿಯಾಗದೇ ಇಹಲೋಕ ತ್ಯಜಿಸಿದ್ದಾರೆ.
1992ರಲ್ಲಿ ತೆರೆಕಂಡ ಸೆಂತಮೀಜ್ ಪಾಟ್ವು ಎಂಬ ತಮಿಳು ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದ ಅವರು, ನಂತರ ಮಲಯಾಳಂ ಸಿನಿಮಾಗಳಲ್ಲಿ ನಟಿಸಿದರು. 1999ರಲ್ಲಿ ತೆರೆಕಂಡ ಹಬ್ಬ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಪ್ರವೇಶ ಮಾಡಿದರು. ಹಬ್ಬ ಬಳಿಕ ಅವರು ನಾಗದೇವತೆ ಸಿನಿಮಾದಲ್ಲಿ ಖಳನಟರಾಗಿ ಕಾಣಿಸಿಕೊಂಡಿದ್ದರು
ಕನ್ನಡ, ತಮಿಳು, ಮಲಯಾಳಂ ಸಿನಿಮಾ ರಂಗದಲ್ಲಿ ವಿಲನ್ ಪಾತ್ರದ ಮೂಲಕವೇ ಗುರುತಿಸಿಕೊಂಡಿದ್ದ ಕಜನ್ ಖಾನ್, ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದರು. ಅಗಲಿದ (Passed Away) ನಟನಿಗೆ ಅನೇಕ ತಾರೆಯರು ಸಂತಾಪ ವ್ಯಕ್ತಪಡಿಸಿದ್ದಾರೆ. ಅವರ ಹಠಾತ್ ನಿಧನ ಚಿತ್ರರಂಗಕ್ಕೆ ಆಘಾತ ಮೂಡಿಸಿದೆ