ಮೈಸೂರು : ವಿದ್ಯಾರ್ಥಿನಿಯರಂತೆ ವಿದ್ಯಾರ್ಥಿಗಳಿಗೂ ಉಚಿತ ಬಸ್ ಪಾಸ್ ನೀಡಬೇಕು ಎಂದು ಮೈಸೂರು ವಿಶ್ವ ವಿದ್ಯಾನಿಲಯದ ಹಿಂದುಳಿದ ವರ್ಗದ ಸಂಶೋದನಾ ವಿದ್ಯಾರ್ಥಿಗಳ ವೇದಿಕೆಯ ಅಧ್ಯಕ್ಷ ಶಿವ ಶಂಕರ್ ಜಿ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರವು ರಾಜ್ಯದ ಮಹಿಳೆಯರಿಗೆಲ್ಲ ಶಕ್ತಿ ಯೋಜನೆಯ ಮೂಲಕ ಉಚಿತ ಬಸ್ ಸಾರಿಗೆ ವ್ಯವಸ್ಥೆ ಮಾಡಿ ಅನುಷ್ಟಾನ ಮಾಡುತ್ತಿರುವುದು ಸ್ವಾಗತಾರ್ಹ. ಈ ಮೂಲಕ ಮಹಿಳಾ ಸಬಲೀಕರಣಕ್ಕೆ ಶ್ರಮಿಸುತ್ತಿದೆ. ಈ ಯೋಜನೆ ಶಾಲಾ ಕಾಲೇಜು ವಿಧ್ಯಾರ್ಥಿನಿಯರಿಗೆ ಕೂಡ ಅನುಕೂಲವಾಗಿದೆ. ಆದರೆ ಈ ಯೋಜನೆಯಿಂದ ವಿದ್ಯಾರ್ಥಿಗಳು ಹೊರಗುಳಿದಿದ್ದಾರೆ ಹಾಗಾಗಿ ಇದನ್ನು ಮತ್ತೆ ಪರಿಶೀಲಿಸಿ ಶಾಲಾ ಕಾಲೇಜುಗಳಿಗೆ ಹೋಗುವ ಗಂಡು ಮಕ್ಕಳಿಗೆ ಉಚಿತ ಸಾರಿಗೆ ವ್ಯವಸ್ಥೆ ಮಾಡುವ ಮೂಲಕ ವಿದ್ಯಾರ್ಥಿಗಳ ನಡುವಿನ ತಾರತಮ್ಯ ಹೋಗಿಸಬೇಕು ಎಂದಿದ್ದಾರೆ
ಅಲ್ಲದೆ ರಾಜ್ಯಾದ್ಯಂತ ಉಚಿತ ಪ್ರಯಾಣ ಬೇಡ ಕೇವಲ ವಿದ್ಯಾರ್ಥಿಗಳ ಊರಿಂದ ಶಾಲಾ ಕಾಲೇಜಿನ ವರೆಗೆ ಈ ಯೋಜನೆಯನ್ನು ಗಂಡು ಮಕ್ಕಳಿಗೆ ವಿಸ್ತರಿಸಬೇಕು ಎಂದು ಈ ಮೂಲಕ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರವನ್ನು ಒತ್ತಾಯಿಸುತ್ತೇನೆ ಎಂದರು.