ಮೈಸೂರು : ಕಳೆದ ಆರು ವರ್ಷಗಳಲ್ಲಿ ಬಹಳಷ್ಟು ತಿರುವುಗಳನ್ನು ನಾನು ಕಂಡಿದ್ದೇನೆ.ಕಾಂಗ್ರೆಸ್ ಬಿಟ್ಟು ಜೆಡಿಎಸ್, ಬಿಜೆಪಿಗೆ ಹೋಗಿ ಬಹಳಷ್ಟು ರಾಜಕೀಯ ಬೆಳವಣಿಗೆಗಳಿಗೆ ನಾನು ಕಾರಣನಾಗಿ ಹೋದೆ ಎಂದು ಎಂ.ಎಲ್.ಸಿ ವಿಶ್ವನಾಥ್ ಹೇಳಿದ್ದಾರೆ.
ಆರು ವರ್ಷಗಳ ಹಿಂದೆ ನಾನು ಬೇಸತ್ತು ಕಾಂಗ್ರೆಸ್ ಗೆ ರಾಜೀನಾಮೆ ನೀಡಿದಾಗ ಪಕ್ಷದ ರಾಜ್ಯಾಧ್ಯಕ್ಷರಾಗಿದ್ಧ ಪರಮೇಶ್ವರ್ ಅವರು ಯಾಕೆ ರಾಜೀನಾಮೆ ಕೊಡ್ತಿದೀರಾ ವಿಶ್ವನಾಥ್, ಮುಂದೆ ಎಲ್ಲವನ್ನು ಸರಿಪಡಿಸಿಕೊಂಡು ಹೋಗೋಣ ಎಂದು ಒಂದು ಮಾತನ್ನು ಹೇಳಲಿಲ್ಲ.
ಯಾವುದೇ ಪ್ರತಿಕ್ರಿಯೆ ನೀಡದೇ ನನ್ನ ರಾಜೀನಾಮೆ ಅಂಗೀಕರಿಸಿ ಬಿಟ್ಟರು.ಪರಿಣಾಮ ನಾನು ವಿಧಿಯಿಲ್ಲದೇ ಬೇರೆ ಪಕ್ಷ ಸೇರಬೇಕಾಯಿತು ಎಂದು ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಎಂಎಲ್ಸಿ ಎಚ್ ವಿಶ್ವನಾಥ್ ಹೇಳಿದರು.